ಶ್ರೀಲಂಕಾದಲ್ಲಿರುವ ತಮಿಳು ಉಗ್ರರಿಗೆ ಅಲ್-ಖೈದಾ ಸೇರಿದಂತೆ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಗಳ ಸಂಪರ್ಕವಿದೆ ಎಂದು ಶ್ರೀಲಂಕಾದ ಪ್ರಧಾನಿ ರತ್ನಸಿರಿ ವಿಕ್ರಮ್‌ನಾಯಕಾ ಆರೋಪಿಸಿದ್ದಾರೆ.
ಪಿಕೆಕೆ, ತಾಲಿಬಾನ್, ಫಿಲಿಪೈನ್ಸ್‌ನಲ್ಲಿರುವ ಇಸ್ಲಾಮಿಕ್ ಗುಂಪುಗಳು ಹಾಗೂ ಜಾಗತಿಕ ಉಗ್ರರ ಸಂಘಟನೆಯಾದ ಆಲ್-ಖೈದಾ ಸಂಘಟನೆಗಳ ಸಂಪರ್ಕವಿದೆ ಎಂದು ಭಯೋತ್ಪಾದಕ ನಿಗ್ರಹದಳದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ವಿಕ್ರಮ್‌ನಾಯಕಾ ಹೇಳಿದ್ದಾರೆ.
ತಮಿಳು ಯುವಕರಿಗೆ ಸಿರಿಯಾದಲ್ಲಿರುವ ಪ್ಯಾಲಿಸ್ತೇನಿ ಶಿಬಿರಗಳಲ್ಲಿ ಹಾಗೂ ಲೆಬೆನಾನ್‌ಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ ಎಂದು ವರದಿಗಳು ಬಂದಿವೆ ಎಂದು ಹೇಳಿದ್ದಾರೆ.
ಕಪ್ಪುಟೈಗರ್‌ಗಳು ಆತ್ಮಹತ್ಯಾ ದಾಳಿಗಳಿಗೆ ಜವಾಬ್ದಾರರಾಗಿದ್ದು, ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಪರಿಣಿತಿಯನ್ನು ಪಡೆದಿದ್ದಾರೆ.ಪ್ಯಾಲೀಸ್ತೇನಿ ಗುಂಪುಗಳಿಂದ ತಮಿಳು ಉಗ್ರರು ತರಬೇತಿಯನ್ನು ಪಡೆದಿದ್ದಾರೆ ಎಂದು ಪ್ರಧಾನಿ ವಿಕ್ರಮ್‌ನಾಯಕಾ ದೇಶದ ಇಂದಿನ ಸ್ಥಿತಿ ಮತ್ತು ಮುಂದಿನ ಭವಿಷ್ಯ ಕುರಿತಂತೆ ಆಯೋಜಿಸಿದ ಸಭೆಯಲ್ಲಿ ಹೇಳಿದ್ದಾರೆ.
|