ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಯೂಸೂಫ್ ರಾಜಾ ಗಿಲಾನಿ ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರವಹಿಸಿಕೊಂಡಿದ್ದು, ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಪ್ರಮಾಣ ವಚನವನ್ನು ಭೋಧಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಕಿಸ್ತಾನ ಪೀಪಲ್ಸ್ ಪಕ್ಷದ ದಿವಂಗತ ಬೇನ್‌ಜಿರ್ ಭುಟ್ಟೋ ಅವರ ಪತಿ ಆಸಿಫ್ ಅಲಿ ಜರ್ದಾರಿ ಹಾಗೂ ಪುತ್ರ ಬಿಲಾವಲ್ ಭುಟ್ಟೋ ಜರ್ದಾರಿ ಅವರು ಪಾಲ್ಗೊಳ್ಳಲು ನಿರಾಕರಿಸಿದರು.
ಗಿಲಾನಿ ಪ್ರಮಾಣ ವಚನ ಸ್ವೀಕಾರ ಅಂತ್ಯವಾಗುತ್ತಿದ್ದಂತೆ ಭುಟ್ಟೋ ಚೀರಾಯವಾಗಲಿ ಎನ್ನುವ ಘೋಷಣೆಗಳು ಕೇಳಿ ಬಂದವು.ನಂತರ ಅಧ್ಯಕ್ಷ ಮುಷರಫ್, ಗಿಲಾನಿ ಅವರಿಗೆ ಹಸ್ತಲಾಘವ ನೀಡಿ ಅಭಿನಂದಿಸಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.ಜರ್ದಾರಿ ಮತ್ತು ಪುತ್ರ ಬಿಲಾವಲ್ ಅವರನ್ನು ಸಮಾರಂಭಕ್ಕೆ ಆಗಮಿಸುವಂತೆ ನೀಡಿದ ಸರಕಾರ ನೀಡಿದ ಅಹ್ವಾನವನ್ನು ತಿರಸ್ಕರಿಸಿದರು.
ಭುಟ್ಟೋ ಹತ್ಯೆಯ ಕೆಲ ವಾರಗಳ ನಂತರ ಫೆಬ್ರವರಿ 18ರಂದು ನಡೆದ ಚುನಾವಣೆಯಲ್ಲಿ ಮುಷರಫ್ ಬೆಂಬಲಿತ ಪಕ್ಷಗಳು ಹೀನಾಯ ಸೋಲನುಭವಿಸಿದ ಹಿನ್ನೆಲೆಯಲ್ಲಿ ಮುಷರಫ್ ಜನಪ್ರೀಯತೆ ಕ್ಷೀಣವಾಯಿತು ಎಂದು ಪಾಕ್ ಮೂಲಗಳು ತಿಳಿಸಿವೆ.
ಭುಟ್ಟೋ ಪಕ್ಷದೊಂದಿಗೆ ಪಾಲುದಾರ ಪಕ್ಷವಾದ ಪಾಕಿಸ್ತಾನ ಮುಸ್ಲಿಮ್ ಲೀಗ್ (ನವಾಜ್)ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎರಡನೇಯ ದೊಡ್ಡ ಪಕ್ಷವಾಗಿದ್ದು, ಮುಖಂಡ ನವಾಜ್ ಷರೀಫ್ ಅವರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಅಹ್ವಾನಿಸುವಂತೆ ಸರಕಾರ ನೀಡಿದ ಅಹ್ವಾನವನ್ನು ತಿರಸ್ಕರಿಸಿದರು ಎಂದು ಸ್ಟೇಟ್ ಟೆಲಿವಿಜನ್ ವರದಿ ಮಾಡಿದೆ.
|