ಆಂತರಿಕ ರಾಜಕೀಯ ವಲಯದಲ್ಲಿ ನಾಗರಿಕ ಅಣು ಒಪ್ಪಂದ ಜಾರಿಗೆ ಸಂಬಂಧಿಸಿದಂತೆ ಇರುವ ಭಿನ್ನಮತಗಳನ್ನು ಪರಿಹರಿಸಿ ಒಮ್ಮತಕ್ಕೆ ಬರಲು ಕೆಲವು ಸಮಯ ಅವಶ್ಯವಿದ್ದು ಆದರೆ ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಅಣು ಒಪ್ಪಂದ ಜಾರಿ ಖಂಡಿತ ಎಂದು ಭಾರತೀಯ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಅವರು ಹೇಳಿದ್ದಾರೆ.
ಶ್ವೇತ ಭವನದಲ್ಲಿ ಅಧ್ಯಕ್ಷ ಜಾರ್ಜ್ ಬುಷ್ ಅವರೊಂದಿಗೆ ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದ ಪ್ರಣಬ್ ಮುಖರ್ಜಿ ಅವರನ್ನು ಒಳಗೊಂಡ ನಾಲ್ವರ ಸದಸ್ಯರ ತಂಡವು ನಾಗರಿಕ ಅಣು ಒಪ್ಪಂದದ ಸ್ಥಿತಿಗತಿಯ ವಿವರ ನೀಡಿದ್ದಾರೆ.
ಅಮೆರಿಕದಿಂದ ವಾಪಸ್ ಭಾರತದತ್ತ ಪ್ರಯಾಣ ಬೆಳೆಸಿದ ಪ್ರಣಬ್ ಮುಖರ್ಜಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತ ದೇಶದ ಆಂತರಿಕ ರಾಜಕೀಯದಲ್ಲಿ ಅಣು ಒಪ್ಪಂದದ ಜಾರಿಯ ಕುರಿತು ತಾತ್ವಿಕ ಮತ್ತು ವಾಸ್ತವಿಕ ಭಿನ್ನಾಭಿಪ್ರಾಯಗಳ ಸರಕಾರದ ಮಿತ್ರಪಕ್ಷಗಳೊಂದಿಗೆ ಇದ್ದು, ಭಿನ್ನಾಭಿಪ್ರಾಯ ಪರಿಹಾರವಾಗುವವರೆಗೆ ಒಪ್ಪಂದ ಜಾರಿಗೊಳಿಸುವುದು ವಿಳಂಬವಾಗಬಹುದು ಎಂದು ಹೇಳಿದರು.
ಸರಕಾರ ಪತನಗೊಂಡರೂ ಒಪ್ಪಂದ ಜಾರಿ ಮಾಡುತ್ತಿರಾ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಪ್ರಣಬ್ ಮುಖರ್ಜಿ ಅವರು ಸರಕಾರವನ್ನು ಬಲಿ ನೀಡುವುದು ಪ್ರಶ್ನೆಯಲ್ಲ. ಸಮಸ್ಯೆಗೆ ಪರಿಹಾರ ಮಾರ್ಗ ಕಂಡುಕೊಳ್ಳುವುದು ಮುಖ್ಯ ಎಂದು ಹೇಳಿದರು.
|