ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಪಾಳ:100 ಟಿಬೆಟ್ ಪ್ರತಿಭಟನಾಕಾರರ ಬಂಧನ
ನಗರದಲ್ಲಿರುವ ಚೀನಾ ರಾಯಭಾರಿ ಕಚೇರಿಯ ಎದುರುಗಡೆ ಪ್ರತಿಭಟನೆ ನಡೆಸುತ್ತಿರುವ 100 ಟಿಬೆಟ್ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ ಎಂದು
ಇಲಾಖೆಯ ಮೂಲಗಳು ತಿಳಿಸಿವೆ.

ಟಿಬೆಟ್‌ನ್ನು ಸ್ವಾತಂತ್ರಗೊಳಿಸಿ ಮತ್ತು ಕಳ್ಳ ಚೀನಿಯರೇ ನಮ್ಮ ದೇಶವನ್ನು ಬಿಟ್ಟು ತೊಲಗಿ ಎನ್ನುವ ಘೋಷಣೆಗಳನ್ನು ಕೂಗುತ್ತಾ ಚೀನಾ ರಾಯಭಾರಿ ಕಚೇರಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು ಎನ್ನಲಾಗಿದೆ.

ಪ್ರತಿಭಟನಾಕಾರರನ್ನು ಪೊಲೀಸ್ ಅಧಿಕಾರಿಗಳು ಮುಖ್ಯದ್ವಾರದಲ್ಲಿ ತಡೆಯಲು ಯತ್ನಿಸಿದಾಗ ಪ್ರತಿಭಟಿಸಿದ ಪ್ರತಿಭಟನಾಕಾರರನ್ನು ಪೊಲೀಸರು 100 ಮಂದಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ಮಾರ್ಚ್ 10 ರಿಂದ ಕಠ್ಮಂಡುವಿನ ವಿಶ್ವಸಂಸ್ಥೆ ಕಚೇರಿಯ ಎದುರುಗಡೆ ಪ್ರತಿಭಟನೆ ನಡೆಸುತ್ತಿದ್ದು,ಚೀನಾ ವಿರೋಧಿ ಮೆರವಣಿಗೆಯನ್ನು ತೆಗೆದುಕೊಂಡು ಚೀನಾ ರಾಯಭಾರಿ ಕಚೇರಿಗೆ ಮುತ್ತಿಗೆ ಹಾಕಿರುವುದು ಮೊದಲ ಬಾರಿಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದ ಮಿತ್ರ ದೇಶವಾದ ಚೀನಾದ ವಿರುದ್ದ ಘೋಷಣೆಗಳನ್ನು ಕೂಗುವುದಾಗಲಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರಕಾರ ಆದೇಶಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ನಾಗರಿಕ ಅಣು ಒಪ್ಪಂದ ಜಾರಿ ಪ್ರಣಬ್ ಘೋಷಣೆ
ಪಾಕ್‌ನೊಂದಿಗೆ ದ್ವಿಪಕ್ಷೀಯ ಮಾತುಕತೆ ಮುಂದುವರಿಕೆ
ಅತಿ ಎತ್ತರದ ವ್ಯಕ್ತಿಯ ಬದುಕೇ ಹೋರಾಟ
ಮಕ್ಕಳಿಗೆ ಚಿತ್ರ ವಿಚಿತ್ರ ಹೆಸರಿಡೋರಿಗೆ ಎಚ್ಚರಿಕೆ!
ಪಾಕ್ ಪ್ರಧಾನಿಯಾಗಿ ಗಿಲಾನಿ
ತಮಿಳು ಉಗ್ರರಿಗೆ ಖೈದಾ ಸಂಪರ್ಕ-ವಿಕ್ರಮ್‌ನಾಯಕಾ