ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಕಾರದೊಂದಿಗೆ ಮಾತುಕತೆಗೆ ಸಿದ್ದ:ಮಾಧೇಸಿ
ಎಪ್ರಿಲ್ 10 ರಂದು ಸಂಸತ್ತಿಗೆ ನಡೆಯಲಿರುವ ಚುನಾವಣೆಯನ್ನು ಅಸ್ತವ್ಯಸ್ತಗೊಳಿಸುವುದಾಗಿ ಬೆದರಿಕೆ ಒಡ್ಡಿದ್ದ ಮಾಧೇಸಿ ಪಂಗಡ ಸರಕಾರದೊಂದಿಗೆ ಮಾತುಕತೆಗೆ ಸಿದ್ದ ಎಂದು ಹೇಳಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಶಸ್ತ್ರಾಸ್ತ್ರ ಹೊಂದಿದ ಗುಂಪುಗಳಾದ ಮಾಧೇಸಿ ಮುಕ್ತಿ ಟೈಗರ್ಸ್ , ಜನತಾಂತ್ರಿಕ ತೇರಾಯಿ ಮುಕ್ತಿ ಮೋರ್ಚಾ, ಆಲ್ ತೇರಾಯಿ ಲಿಬರೇಶನ್ ಫ್ರಂಟ್‌ಗಳು ಸರಕಾರದೊಂದಿಗೆ ಮಾತುಕತೆಗೆ ಸಿದ್ದವಾಗಿವೆ ಎಂದು ಪುನರ್‌ನಿರ್ಮಾಣ ಹಾಗೂ ಶಾಂತಿ ಖಾತೆ ಸಚಿವ ರಾಮಚಂದ್ರಾ ಪೌದಯಾಳ್ ತಿಳಿಸಿದ್ದಾರೆ.


ನಾವು ಮಾತುಕತೆಗಾಗಿ ಮನವಿ ಪತ್ರವನ್ನು ಮಾಧೇಸಿ ಪಂಗಡದ ನಾಯಕರಿಗೆ ಕಳುಹಿಸಿದ್ದು, ಮಾತುಕತೆಗಾಗಿ ಸಮಿತಿಯನ್ನು ರಚಿಸುವಂತೆ ಕೋರಿದ್ದಾರೆ.ಎರಡು ದಿನಗಳಲ್ಲಿ ಸಮಿತಿಯನ್ನು ರಚಿಸಲಾಗುವುದು ಎಂದು ಸಚಿವ ರಾಮಚಂದ್ರಾ ತಿಳಿಸಿದ್ದಾರೆ.

ಮಾಧೇಸಿ ಪಂಗಡದವರು ಆರ್ಥಿಕ ಸಮಾನಾತೆ ಹಾಗೂ ರಾಜಕೀಯ ಹಕ್ಕು ಹಾಗೂ ತೇರಾಯಿ ಪ್ರಾಂತ್ಯದಲ್ಲಿರುವ ಜನತೆಗೆ ಹೆಚ್ಚಿನ ಸ್ವಾಯತ್ಯತೆ ನೀಡುವಂತೆ ಹೋರಾಟ ನಡೆಸುತ್ತಿದ್ದು ಚುನಾವಣೆಯನ್ನು ಅಸ್ತವ್ಯಸ್ತಗೊಳಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ.

ಕಳೆದ ತಿಂಗಳು ನೇಪಾಳದ ಸರಕಾರ ಯುನೈಟೆಡ್ ಮಾಧೇಸಿ ಡೆಮಾಕ್ರೆಟಿಕ್ ಫ್ರಂಟ್‌ನೊಂದಿಗೆ ಮಾತುಕತೆ ನಡೆಸಿ ಒಪ್ಪಂದ ಮಾಡಿಕೊಂಡು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದೆ.ಆದರೆ ಸರಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಮಾಧೇಸಿ ಪಂಗಡದವರು ಶಸ್ತ್ರಾಸ್ತ್ರ ಹೋರಾಟ ಮುಂದುವರೆಸಲು ನಿರ್ಧರಿಸಿದ್ದಾರೆ.



ಮತ್ತಷ್ಟು
ನೇಪಾಳ:100 ಟಿಬೆಟ್ ಪ್ರತಿಭಟನಾಕಾರರ ಬಂಧನ
ನಾಗರಿಕ ಅಣು ಒಪ್ಪಂದ ಜಾರಿ ಪ್ರಣಬ್ ಘೋಷಣೆ
ಪಾಕ್‌ನೊಂದಿಗೆ ದ್ವಿಪಕ್ಷೀಯ ಮಾತುಕತೆ ಮುಂದುವರಿಕೆ
ಅತಿ ಎತ್ತರದ ವ್ಯಕ್ತಿಯ ಬದುಕೇ ಹೋರಾಟ
ಮಕ್ಕಳಿಗೆ ಚಿತ್ರ ವಿಚಿತ್ರ ಹೆಸರಿಡೋರಿಗೆ ಎಚ್ಚರಿಕೆ!
ಪಾಕ್ ಪ್ರಧಾನಿಯಾಗಿ ಗಿಲಾನಿ