ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕ್ ಗಡಿಯಲ್ಲಿ 40 ಪ್ರಯಾಣಿಕರ ಅಪಹರಣ
ಅಫಘಾನಿಸ್ತಾನದ ಕಾರಾಗೃಹದಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪಾಕ್ -ಅಫಘಾನ್ ಗಡಿ ಭಾಗದಲ್ಲಿರುವ ಬುಡಕಟ್ಟು ಪ್ರದೇಶದಲ್ಲಿ 40 ಮಂದಿ ಪ್ರಯಾಣಿಕರನ್ನು ಶಸ್ತ್ರಾಸ್ತ್ರ ಹೊಂದಿದ ಬುಡಕಟ್ಟು ಜನಾಂಗದ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಪಾಕ್ ಮೂಲಗಳು ತಿಳಿಸಿವೆ.

ಪಾಕಿಸ್ತಾನ-ಅಫಗಾನಿಸ್ಥಾನ ಸ್ನೇಹಿ ಬಸ್‌‌ನ್ನು ಬುಡಕಟ್ಟು ಉಗ್ರರು ಅನಾಮಧೇಯ ಸ್ಥಳಕ್ಕೆ ತೆಗೆದುಕೊಂಡು ಹೋಗಿದ್ದು, ಪ್ರಯಾಣಿಕರ ಬದಲಿಗೆ ಕಾರಾಗೃಹದಲ್ಲಿರುವ ಬಂಧಿತರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಪಹರಣಕಾರರೊಂದಿಗೆ ಸರಕಾರ ಸಂಧಾನ ನಡೆಸುತ್ತಿದ್ದು ಪ್ರಯಾಣಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಕಿಸ್ತಾನದ ಅಧಿಕಾರಿಗಳು ಅಫಘಾನಿಸ್ತಾನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಅಫಘಾನಿಸ್ತಾನದ ಕಾರಗೃಹದಲ್ಲಿರುವ ಬಂಧಿಗಳ ಬಿಡುಗಡೆ ಕುರಿತಂತೆ ಮಾತುಕತೆಗಳು ನಡೆಯುತ್ತಿವೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಮತ್ತಷ್ಟು
ಸರಕಾರದೊಂದಿಗೆ ಮಾತುಕತೆಗೆ ಸಿದ್ದ:ಮಾಧೇಸಿ
ನೇಪಾಳ:100 ಟಿಬೆಟ್ ಪ್ರತಿಭಟನಾಕಾರರ ಬಂಧನ
ನಾಗರಿಕ ಅಣು ಒಪ್ಪಂದ ಜಾರಿ ಪ್ರಣಬ್ ಘೋಷಣೆ
ಪಾಕ್‌ನೊಂದಿಗೆ ದ್ವಿಪಕ್ಷೀಯ ಮಾತುಕತೆ ಮುಂದುವರಿಕೆ
ಅತಿ ಎತ್ತರದ ವ್ಯಕ್ತಿಯ ಬದುಕೇ ಹೋರಾಟ
ಮಕ್ಕಳಿಗೆ ಚಿತ್ರ ವಿಚಿತ್ರ ಹೆಸರಿಡೋರಿಗೆ ಎಚ್ಚರಿಕೆ!