ಅನಧಿಕೃತವಾಗಿ ಭಾರತವನ್ನು ಪ್ರವೇಶಿಸಿದ ಕೆನಡಾ ನಾಗರಿಕನನ್ನು ಬಂಧಿಸಿ ಬಿಹಾರ್ ಕಾರಾಗೃಹದಲ್ಲಿಡಲಾಗಿದ್ದು, 10 ತಿಂಗಳ ನಂತರ ಬಿಡುಗಡೆ ಮಾಡಲಾಗಿದೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.
ಕೆನಡಾ ಉದ್ಯಮಿ ಸಾವೂಲ್ ಇಝಾಯಕ್ ಅವರು ಭಾರತವನ್ನು ಅನಧಿಕೃತವಾಗಿ ಪ್ರವೇಶಿಸಿದ್ದರಿಂದ ಭಾರತ- ನೇಪಾಳ ಗಡಿಯಲ್ಲಿ ಬಂಧಿಸಲಾಗಿತ್ತು.ಬಿಹಾರ್‌ನ ಪೂರ್ವ ಚಂಪಾರಣ್ಯ ಜಿಲ್ಲೆಯ ಸೆಷೆನ್ ನ್ಯಾಯಾಲಯ ಕೆನಡಾ ಸರಕಾರದ ಮನವಿಯ ಮೇರೆಗೆ ಮೂರು ವರ್ಷಗಳ ಶಿಕ್ಷೆಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ
ಹತ್ತು ತಿಂಗಳ ಸೆರವಾಸದಲ್ಲಿ ತುಂಬಾ ಕಠಿಣ ದಿನಗಳನ್ನು ಎದುರಿಸಿದ್ದು,ನಾನು ಈಗ ಬಿಡುಗಡೆಯಾಗುತ್ತಿದ್ದು, ಕೆನಡಾಗೆ ಮರಳಿ ಹೋಗುತ್ತೇನೆ ಎಂದು ಕೆನಡಾ ಉದ್ಯಮಿ ಸಾವೂಲ್ ಇಝಾಯಕ್ ಸಂತಸ ವ್ಯಕ್ತಪಡಿಸಿದ್ದಾರೆ.
ಕೆನಡಾದ ಉದ್ಯಮಿ ರಜೆ ದಿನಗಳನ್ನು ಕಳೆಯಲು ನೇಪಾಳಕ್ಕೆ ಭೇಟಿ ನೀಡಿದ್ದು, ಹಣವರ್ಗಾವಣೆಗಾಗಿ ಕಾರು ಚಾಲಕನನ್ನು ರಕ್ಸಾವುಲ್‌ಗೆ ಕಳುಹಿಸಿದ್ದರು. ಭಾರತ ನೇಪಾಳ ಗಡಿಯಲ್ಲಿರುವ ಪೊಲೀಸರು ಕಾರಿನಲ್ಲಿದ್ದ ಅವರ ಲಗೇಜ್‌ನ್ನು ಪರಿಶೀಲಿಸಿದ ನಂತರ ದೇಶದೊಳಗೆ ಅನಧಿಕೃತವಾಗಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಬಂಧಿಸಿದ್ದರು.
|