ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿರುವ ಅಲ್‌ಖೈದಾ ಉಗ್ರರ ವಿರುದ್ದ ಅಮೆರಿಕ ವಾಯುದಾಳಿಯನ್ನು ಹೆಚ್ಚಿಸಿದ್ದು,ನೂತನ ಸರಕಾರದಿಂದ ಅಡ್ಡಿಯಾಗಬಹುದೆಂದು ಭೀತಿಯನ್ನು ವ್ಯಕ್ತಪಡಿಸಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಅಮೆರಿಕ ಅಲ್‌ಖೈದಾ ಸಂಪರ್ಕಜಾಲವನ್ನು ಸಾಧ್ಯವಾದಷ್ಟು ಮಟ್ಟಿಗೆ ನಾಶ ಮಾಡಲು ಪ್ರಯತ್ನಿಸುತ್ತಿದ್ದು,ಮುಂದಿನ ದಿನಗಳಲ್ಲಿ ಮುಷರಫ್ ಬೆಂಬಲ ದೊರೆಯುವ ಸಾಧ್ಯೆತೆಗಳು ಕಡಿಮೆಯಾದಲ್ಲಿ ದಾಳಿಗೆ ಅಡ್ಡಿ ಎದುರಾಗಲಿದೆ ಎಂದು ಹೆಸರು ಹೇಳಲಿಚ್ಚಿಸದ ಅಮೆರಿಕ ಸೇನಾಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ದದ ಹೋರಾಟದಲ್ಲಿ ಮುಷರಫ್ ಅಮೆರಿಕೆಗೆ, ಉಗ್ರರ ವಿರುದ್ದದ ದಾಳಿಗೆ ಸಂಪೂರ್ಣ ಬೆಂಬಲ ನೀಡಿದ್ದು , ನೂತನ ಸರಕಾರದ ಅಸ್ತಿತ್ವದಿಂದಾಗಿ ಅಧಿಕಾರ ವಂಚಿತರಾಗಿದ್ದಾರೆ ಎಂದು ಅಮೆರಿಕ ಹೇಳಿದೆ.
ಅಮೆರಿಕ ಅಫಘಾನಿಸ್ತಾನ ಗಡಿ ಪ್ರದೇಶದಲ್ಲಿ ಉಗ್ರರ ವಿರುದ್ದ ನಡೆಸಿದ ದಾಳಿಯಲ್ಲಿ 45 ಅರಬ್, ಅಫಘಾನ್ ಮತ್ತು ವಿದೇಶಿ ಉಗ್ರರು ಹತರಾಗಿದ್ದಾರೆ ಅಮೆರಿಕದ ಸೇನಾಧಿಕಾರಿಗಳು ತಿಳಿಸಿದ್ದಾರೆ.
|