ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಲೈಲಾಮಾ, ಚೀನಾ ಶಾಂತಿಮಾತುಕತೆ ಅಗತ್ಯ-ಅಮೆರಿಕ
ಟಿಬೆಟ್ ಪ್ರತಿಭಟನಾಕಾರರ ವಿರುದ್ದ ಚೀನಾದ ಸೇನಾಪಡೆಗಳು ನಡೆಸುತ್ತಿರುವ ಹಿಂಸಾಚಾರವನ್ನು ಅಂತ್ಯಗೊಳಿಸಿ ದಲೈಲಾಮಾ ಅವರೊಂದಿಗೆ ಚೀನಾ ಶಾಂತಿ ಮಾತುಕತೆ ಪುನರಾರಂಭಿಸಲು ಅಮೆರಿಕ ಅಧ್ಯಕ್ಷ ಜಾರ್ಜ್‌ಬುಷ್ ಮನವಿ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಜಾರ್ಜ್‌ಬುಷ್ ಚೀನಾದ ಅಧ್ಯಕ್ಷ ಹು ಜಿಂಟಾವೋ ಅವರಿಗೆ ದೂರವಾಣಿ ಕರೆ ಮಾಡಿ ಟಿಬೆಟ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗಾಣಿಸಿ ದಲೈಲಾಮಾ ಅವರೊಂದಿಗೆ ಮಾತುಕತೆ ನಡೆಸುವುದಲ್ಲದೇ ಮಾಧ್ಯಮಗಳನ್ನು ಹಾಗೂ ರಾಯಭಾರಿಗಳನ್ನು ಟಿಬೆಟ್‌ ಪ್ರವೇಶಕ್ಕೆ ಅನುವು ಮಾಡಿಕೊಡಬೇಕು ಎಂದು ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಜಾರ್ಜ್‌ಬುಷ್ ಚೀನಾದ ಅಧ್ಯಕ್ಷ ಹು ಜಿಂಟಾವೋ ಅವರಿಗೆ ಟಿಬೆಟ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ದಲೈಲಾಮಾ ಅವರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುವುದು ಉತ್ತಮ ಮಾರ್ಗ ಎಂದು ಹೇಳಿದ್ದಾರೆ.

ಚೀನಾ ಸರಕಾರದ ಅಧಿಕಾರಿಗಳು ಹಾಗೂ ದಲೈಲಾಮಾ ಪ್ರತಿನಿಧಿಗಳು ಈ ಹಿಂದೆ ಶಾಂತಿಮಾತುಕತೆ ನಡೆಸಿದ್ದು ಅದನ್ನು ಪುನರಾರಂಭಿಸುವ ಅಗತ್ಯವಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸ್ಟೀಫನ್ ಹ್ಯಾಡ್ಲಿ ತಿಳಿಸಿದ್ದಾರೆ.
ಮತ್ತಷ್ಟು
ಪಾಕ್‌ ನೆಲದಲ್ಲಿ ಖೈದಾ ವಿರುದ್ದ ಅಮೆರಿಕ ದಾಳಿ
ಬಿಹಾರ್ ಜೈಲಿನಿಂದ ಕೆನಡಾ ನಾಗರಿಕ ಬಿಡುಗಡೆ
ಪಟಾಕಿ ಸ್ಪೋಟ:22 ಮಂದಿ ಸಾವು
ಪಾಕ್ ಗಡಿಯಲ್ಲಿ 40 ಪ್ರಯಾಣಿಕರ ಅಪಹರಣ
ಸರಕಾರದೊಂದಿಗೆ ಮಾತುಕತೆಗೆ ಸಿದ್ದ:ಮಾಧೇಸಿ
ನೇಪಾಳ:100 ಟಿಬೆಟ್ ಪ್ರತಿಭಟನಾಕಾರರ ಬಂಧನ