ಟಿಬೆಟ್ ಹಿಂಸಾಚಾರದಲ್ಲಿ ತಮ್ಮ ಕೈವಾಡವಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿದ ಟಿಬೆಟ್ ಧಾರ್ಮಿಕ ಗುರು ವಾಸ್ತವತೆಯನ್ನು ಒಪ್ಪಿಕೊಳ್ಳಿ 21ನೇಯ ಶತಮಾನದಲ್ಲಿ ಸುಳ್ಳಿನಿಂದ ಎನನ್ನು ಸಾಧಿಸಲು ಆಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಅಧ್ಯಾತ್ಮಿಕ ಕಾರ್ಯಾಗಾರದ ನಿಮಿತ್ಯ ನವದೆಹಲಿಗೆ ಆಗಮಿಸಿದ ಧಾರ್ಮಿಕ ಗುರು ದಲೈಲಾಮಾ ಜಗತ್ತಿನ ಎಲ್ಲ ಮಿತ್ರ ದೇಶಗಳು ಟಿಬೆಟ್ ಕುರಿತಂತೆ ಕಾಳಜಿ ವಹಿಸುವಂತೆ ಮನವಿ ಮಾಡಿದರು.
ಪ್ರಸ್ತುತ ಸ್ಥಿತಿಯಲ್ಲಿ ಚೀನಾ ದೇಶದ ಸರಕಾರ ಹಾಗೂ ಅಧಿಕಾರಿಗಳು ವಾಸ್ತವತೆಯನ್ನು ಅರಿತುಕೊಂಡು ಮುನ್ನಡೆಯುವುದು ಸೂಕ್ತ ಎಂದು ಚೀನಾ ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಟಿಬೆಟ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಟಿಬೆಟ್ ಧಾರ್ಮಿಕ ಗುರು ದಲೈಲಾಮಾ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಚೀನಾ ಪ್ರಧಾನಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ದಲೈಲಾಮಾ ಪ್ರತಿಕ್ರಿಯೇ ನೀಡಿದ್ದಾರೆ.
ಟಿಬೆಟ್ ಹಿಂಸಾಚಾರದಲ್ಲಿ ಮಡಿದವರಿಗಾಗಿ ರಾಜ್‌ಘಾಟ್‌ನಲ್ಲಿರುವ ಮಹಾತ್ಮಗಾಂಧಿಯವರ ಸಮಾಧಿ ಬಳಿ ಶನಿವಾರದಂದು ನಡೆಯುವ ಪ್ರಾರ್ಥನಾ ಸಭೆಯ ನೇತೃತ್ವವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
|