ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಫ್ತಿಕಾರ್ ಚೌಧರಿ, ಜರ್ದಾರಿ ಭೇಟಿ
ಪಾಕಿಸ್ತಾನದ ಪದಚ್ಯುತ ಮುಖ್ಯ ನ್ಯಾಯಾಧೀಶ ಇಫ್ಥಿಕಾರ ಮೊಹಮ್ಮದ್ ಚೌಧರಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಆಸಿಫ್ ಅಲಿ ಜರ್ದಾರಿ ಅವರನ್ನು ಭೇಟಿ ಮಾಡಿ ಮಾಜಿಪ್ರಧಾನಿ ಬೇನ್‌ಜಿರ್ ಭುಟ್ಟೋ ಅವರ ಸಾವಿನ ಕುರಿತಂತೆ ಸಂತಾಪ ಸೂಚಿಸಿದರು.

ಸೋಮವಾರದಂದು ಪಾಕ್ ಪ್ರಧಾನಿಯಾಗಿ ಆಯ್ಕೆಯಾದ ಯೂಪೂಫ್ ರಾಜಾ ಗಿಲಾನಿ ಪಾಕಿಸ್ತಾನದ ಪದಚ್ಯುತ ಮುಖ್ಯ ನ್ಯಾಯಾಧೀಶ ಇಫ್ಥಿಕಾರ ಮೊಹಮ್ಮದ್ ಚೌಧರಿ ಅವರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ ನಂತರ ಜರ್ದಾರಿ ಅವರ ಕರೆಯ ಮೇರೆಗೆ ಜರ್ದಾರಿ ನಿವಾಸಕ್ಕೆ ಚೌಧರಿ ತೆರಳಿದ್ದರು.

ಕಳೆದ ವರ್ಷ ರಾಷ್ಟ್ರಾಧ್ಯಕ್ಷ ಪರ್ವೇಜ್ ಮುಷರಫ್ ತುರ್ತುಪರಿಸ್ಥಿತಿ ಹೇರಿದ ನಂತರ ನ್ಯಾಯಾಧೀಶರುಗಳನ್ನು ಅಮಾನತುಗೊಳಿಸಿದ್ದು, ಪುನರ್‌ನೇಮಕ ಮಾಡುವ ವಿವಾದದ ಸಂದರ್ಭದಲ್ಲಿ ಪದಚ್ಯುತ ಮುಖ್ಯ ನ್ಯಾಯಾಧೀಶ ಇಫ್ಥಿಕಾರ ಮೊಹಮ್ಮದ್ ಚೌಧರಿ ರಾಜಕೀಯ ನಾಯಕರನ್ನು ಭೇಟಿ ಮಾಡುವುದು ಸರಿಯಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸಯ್ಯಿದ್ -ಉಜ್-ಜಮಾನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜರ್ದಾರಿ ನಿವಾಸದ ಹೊರಗೆ ಕಾಯುತ್ತಿದ್ದ ಮಾಧ್ಯಮದವರಿಗೆ ಚೌಧರಿ ಜೊತೆಯಲ್ಲಿದ್ದ ನಿವೃತ್ತ ನ್ಯಾಯಾಧೀಶ ತಾರೀಖ್ ಮೊಹಮ್ಮದ್ ಭುಟ್ಟೋ ಸಾವಿಗೆ ಸಂತಾಪ ಸೂಚಿಸಲು ಚೌಧರಿ ಜರ್ದಾರಿ ನಿವಾಸಕ್ಕೆ ಆಗಮಿಸಿದ್ದಾರೆ ಎಂದು ಹೇಳಿದರು.
ಮತ್ತಷ್ಟು
ಸುಳ್ಳು ಕೆಲಸ ಮಾಡುವುದಿಲ್ಲ - ದಲೈಲಾಮಾ
ದಲೈಲಾಮಾ, ಚೀನಾ ಶಾಂತಿಮಾತುಕತೆ ಅಗತ್ಯ-ಅಮೆರಿಕ
ಪಾಕ್‌ ನೆಲದಲ್ಲಿ ಖೈದಾ ವಿರುದ್ದ ಅಮೆರಿಕ ದಾಳಿ
ಬಿಹಾರ್ ಜೈಲಿನಿಂದ ಕೆನಡಾ ನಾಗರಿಕ ಬಿಡುಗಡೆ
ಪಟಾಕಿ ಸ್ಪೋಟ:22 ಮಂದಿ ಸಾವು
ಪಾಕ್ ಗಡಿಯಲ್ಲಿ 40 ಪ್ರಯಾಣಿಕರ ಅಪಹರಣ