ನಾರ್ಥ್‌ವೆಸ್ಟ್‌ನ ಸ್ವಾತ್ ಕಣಿವೆಯಲ್ಲಿ ಸ್ಥಳಿಯ ತಾಲಿಬಾನಿಗಳೊಂದಿಗೆ ಹೋರಾಟ ನಡೆಸುತ್ತಿರುವ ಭಧ್ರತಾ ಪಡೆಗಳ ಬೆಂಬಲಕ್ಕೆನೀಯೋಜಿಸಿದ ಪೊಲೀಸರು ಕರ್ತವ್ಯ ನಿರ್ವಹಣೆಗೆ ಹೆದರಿದ್ದರಿಂದ 50 ಪೊಲೀಸರನ್ನು ವಜಾ ಮಾಡಿ ಆದೇಶ ಹೊರಡಿಸಲಾಗಿದೆ.
ಕಳೆದ ವರ್ಷ ತಾಲಿಬಾನ್ ಬೆಂಬಲಿತ ಮೌಲ್ವಿ ಮೌಲಾನಾ ಫಜುಲುಲ್ಲಾ ವಿರುದ್ದ ನಡೆದ ಕಾರ್ಯಾಚರಣೆಯ ನಂತರ ಸುಮಾರು 200 ಪೊಲೀಸರು ಅನಧಿಕೃತ ರಜೆಯ ಮೇಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಮಿನ್‌ಗೋರಾ ತಿಳಿಸಿದ್ದಾರೆ.
ನಾರ್ಥ್‌ವೆಸ್ಟ್ ಫ್ರಂಟೈಯರ್ ಪ್ರಾಂತ್ಯದ ಸ್ವಾತ್ ಜಿಲ್ಲೆಯಲ್ಲಿ ಪೊಲೀಸರು ಅಧೈರ್ಯದಿಂದ ಕರ್ತವ್ಯಕ್ಕೆ ಗೈರು ಹಾಜರಾಗುತ್ತಿರುವುದರಿಂದ ಅಂತಹ ಪೊಲೀಸರನ್ನು ವಜಾ ಮಾಡಲಾಗಿದೆ ಎಂದು ಮಿನ್‌ಗೋರಾ ಹೇಳಿದ್ದಾರೆ.
ಸುಮಾರು 200 ಮಂದಿ ಪೊಲೀಸರು ಅನುಮತಿ ಇಲ್ಲದ ಗೈರುಹಾಜರಾಗಿದ್ದು, ಮಿನ್‌ಗೊರಾ ಠಾಣೆಯ 200 ಮಂದಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಖಾನ್ ತಿಳಿಸಿದ್ದಾರೆ.
|