ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತಕ್ಕೆ ಮೊದಲ ಭೇಟಿ:ಭೂತಾನ್ ಪ್ರಧಾನಿ
ಸರಕಾರ ರಚನೆಯಾಗಿ ಅಧಿಕಾರ ಸ್ವೀಕಾರದ ನಂತರ ಭಾರತಕ್ಕೆ ಭೇಟಿ ನೀಡಲು ಮೊದಲ ಆದ್ಯತೆ ನೀಡುವುದಾಗಿ ಭೂತಾನ್‌ನ ಭಾವಿ ಪ್ರಧಾನಿ ಜಿಗ್ಮಿ ವೈ ಥಿನ್ಲೆ ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಜಾಪ್ರಭುತ್ವ ಸರಕಾರದ ಪ್ರಧಾನ ಮಂತ್ರಿಯಾಗಿ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ದೇಶವಾದ ಭಾರತಕ್ಕೆ ಭೇಟಿ ನೀಡಲು ಇಚ್ಚಿಸುತ್ತೇನೆ ಎಂದು ಪೆಮಗಟ್ಶೆಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತ ಮತ್ತು ಭೂತಾನ್ ದೇಶಗಳು ಒಗ್ಗಟ್ಟು, ಸ್ನೇಹಪರತೆ ಹಾಗೂ ಪರಸ್ಪರ ತಿಳುವಳಿಕೆಯಿಂದ ಉಭಯ ದೇಶಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಥಿನ್‌ಲೇ ತಿಳಿಸಿದ್ದಾರೆ.

ರಾಜಪ್ರಭುತ್ವದಲ್ಲಿದ್ದ ಸರಕಾರದಂತೆ ಪ್ರಜಾಪ್ರಭುತ್ವದ ಸರಕಾರ ಕೂಡಾ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಿಂದ ದೇಶದ ಜನತೆಯ ಹಿತರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಥಿನ್‌ಲೇ ಹೇಳಿದ್ದಾರೆ.
ಮತ್ತಷ್ಟು
ಪಾಕ್‌: ಕರ್ತವ್ಯಕ್ಕೆ ಹೆದರಿದ 50 ಪೊಲೀಸರ ವಜಾ
ಅಮೆರಿಕದಲ್ಲಿ ಭಾರತೀಯ ಸೈನಿಕರ ಕಣ್ಮರೆ
ಇಫ್ತಿಕಾರ್ ಚೌಧರಿ, ಜರ್ದಾರಿ ಭೇಟಿ
ಸುಳ್ಳು ಕೆಲಸ ಮಾಡುವುದಿಲ್ಲ - ದಲೈಲಾಮಾ
ದಲೈಲಾಮಾ, ಚೀನಾ ಶಾಂತಿಮಾತುಕತೆ ಅಗತ್ಯ-ಅಮೆರಿಕ
ಪಾಕ್‌ ನೆಲದಲ್ಲಿ ಖೈದಾ ವಿರುದ್ದ ಅಮೆರಿಕ ದಾಳಿ