ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಜಾರ್ಜ್ ಎಚ್ ಬುಷ್ ಮತ್ತು ಜಾನ್ ಎಫ್ ಕೆನಡಿ ಮತ್ತು ರೋನಾಲ್ಡ್ ರೀಗನ್ ಅನುಸರಿಸಿದ ಸಾಂಪ್ರದಾಯಿಕ ವಿದೇಶಾಂಗ ನೀತಿಯನ್ನು ಅಧ್ಯಕ್ಷನಾಗಿ ಆಯ್ಕೆಯಾದರೆ ಅನುಸರಿಸುವುದಾಗಿ ಬರಾಕ್ ಓಬಾಮಾ ಹೇಳಿದ್ದಾರೆ.
ಗ್ರೀನ್ಸ್ ಬರ್ಗ್‌ನ ಶಾಲೆಯೊಂದರಲ್ಲಿ ಮಾತನಾಡುತ್ತಿದ್ದ ಓಬಾಮಾ ಅವರು ಜಾರ್ಜ್ ಎಚ್ ಬುಷ್ ಅವರು ಗಲ್ಫ್ ಯುದ್ದವನ್ನು ನಿಭಾಯಿಸಿದ ರೀತಿಯನ್ನು ಕೊಂಡಾಡಿದರು. ಯುದ್ಧದಲ್ಲಿ ಪಾಲ್ಗೊಂಡ ಮಿತ್ರ ರಾಷ್ಟ್ರಗಳೊಂದಿಗೆ ಯುದ್ಧ ಕಾಲದಲ್ಲಿ ಉತ್ತಮ ಸಂಬಂಧವನ್ನು ಹೊಂದಿದ್ದರು ಎಂದು ಹೇಳಿದರು.
ಅಧ್ಯಕ್ಷೀಯ ಚುನಾವಣೆಗೆ ಓಬಾಮಾ ಅವರು ಆರು ದಿನಗಳ ಪ್ರವಾಸವನ್ನು ಪೆನ್ಸಿಲ್ವಿನಿಯಾದಿಂದ ಪ್ರಾರಂಭಿಸಿದ್ದು ಪ್ರಾಥಮಿಕ ಹಂತದ ಆಯ್ಕೆಯು ಬಾಕಿ ಇದ್ದು ಅಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ಒಬಾಮಾ ನಡುವೆ ನಿಕಟ ಸ್ಪರ್ಧೆ ಎರ್ಪಟ್ಟಿದೆ.
ವಾಸ್ತವಿಕವಾಗಿ ನನ್ನ ವಿದೇಶಾಂಗ ನೀತಿಯು ಪೂರ್ಣವಾಗಿ ಸಾಂಪ್ರದಾಯಿಕ ನೀತಿಯ ಮೇಲೆ ನಿಂತಿದ್ದು ದ್ವಿಪಕ್ಷೀಯ ಮತ್ತು ವಾಸ್ತವಿಕ ನೆಲೆಗಟ್ಟಿನ ಮೇಲೆ ನಿಂತಿದೆ. ಜಾರ್ಜ್ ಬುಷ್, ಜಾನ್ ಎಫ್ ಕೆನಡಿ ಅನುಸರಿಸುತ್ತಿದ್ದ ವಿದೇಶಾಂಗ ನೀತಿಯ ಕೆಲ ಅಂಶಗಳನ್ನು ಹೋಲುತ್ತದೆ ಎಂದು ಒಬಾಮಾ ಹೇಳಿದರು.
|