ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರೊಂದಿಗೆ ಪಾಕ್ ಪ್ರಧಾನಿ ಮಾತುಕತೆಗೆ ಒಲವು
ಶಸ್ತ್ರಾಸ್ತ್ರ ತ್ಯಜಿಸಲು ಇಚ್ಚಿಸುತ್ತಿರುವ ಉಗ್ರವಾದಿಗಳೊಂದಿಗೆ ತಮ್ಮ ಸರಕಾರ ಮಾತುಕತೆಯ ಮೂಲಕ ಸಮಸ್ಯೆಗೆ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ಆದ್ಯತೆ ನೀಡುತ್ತದೆ. ಮತ್ತು ಪರ್ವೇಜ್ ಮುಷರಫ್ ಅವರ ಆಡಳಿತಾವಧಿಯಲ್ಲಿ ಪದಚ್ಯುತಗೊಂಡಿರುವ ನ್ಯಾಯಾಧೀಶರನ್ನು ಪುನಃ ನೇಮಕ ಮಾಡಿಕೊಳ್ಳಲಾಗುವುದು ಎಂದು ನೂತನವಾಗಿ ಪ್ರಧಾನಿ ಹುದ್ದೆಗೆ ಆಯ್ಕೆಯಾಗಿರುವ ಯುಸೂಫ್ ರಾಜಾ ಗಿಲಾನಿ ಪ್ರಕಟಿಸಿದ್ದಾರೆ.

ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿರೋಧವಾಗಿ ಪ್ರಧಾನಿ ಹುದ್ದೆಗೆ ಆಯ್ಕೆಯಾದ ನಂತರ ನ್ಯಾಷನಲ್ ಅಸೆಂಬ್ಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಇಂದು ಮೂಲಭೂತವಾದ ಮತ್ತು ಭಯೋತ್ಪಾದನೆಯ ಸಮಸ್ಯೆಗಳು ಪಾಕಿಸ್ತಾನವನ್ನು ಅಪಾಯದಂಚಿಗೆ ತಳ್ಳಿದ್ದು ಭಯೋತ್ಪಾದನೆಯ ವಿರುದ್ಧ ಯುದ್ಧ ಸಾರಿದೆ ಎಂದು ಹೇಳಿದರು.

ರಾಷ್ಟ್ರದಲ್ಲಿ ಶಾಂತಿ ಮತ್ತು ಭಯೋತ್ಪಾದನೆಗೆ ಅಂತ್ಯಹೇಳುವುದು ಸರಕಾರದ ಮೊದಲ ಆದ್ಯತೆಯಾಗಿದೆ. ಭಯೋತ್ಪಾದನೆಯ ವಿರುದ್ಧ ನಡೆಯುತ್ತಿರುವ ಯುದ್ಧ ನಮ್ಮದೇ ಯುದ್ಧ ಎಂದು ಹೇಳಿದ ಅವರು ಉಗ್ರವಾದದ ಕಾರಣ ಏಣಿಕೆಗೆ ಸಿಗದ ಸಂಖ್ಯೆಯಲ್ಲಿ ಯುವಕರು ಮತ್ತು ಮಕ್ಕಳು ಹುತಾತ್ಮರಾಗಿದ್ದಾರೆ. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸರಕಾರವು ಆಲ್ ಖೈದಾ ಮತ್ತು ತಾಲಿಬಾನ್ ಉಗ್ರರೊಂದಿಗೆ ಸೌಹಾರ್ಧಯುತ ಸಂಬಂಧ ಬೆಳೆಸಬಹುದು ಎನ್ನುವ ಅಮೆರಿಕದ ಆತಂಕಕ್ಕೆ ಈ ರೀತಿ ಉತ್ತರ ನೀಡಿದ್ದಾರೆ.
ಮತ್ತಷ್ಟು
ಸಾಂಪ್ರದಾಯಿಕ ವಿದೇಶಾಂಗ ನೀತಿ: ಓಬಾಮಾ
ಭಾರತಕ್ಕೆ ಮೊದಲ ಭೇಟಿ:ಭೂತಾನ್ ಪ್ರಧಾನಿ
ಪಾಕ್‌: ಕರ್ತವ್ಯಕ್ಕೆ ಹೆದರಿದ 50 ಪೊಲೀಸರ ವಜಾ
ಅಮೆರಿಕದಲ್ಲಿ ಭಾರತೀಯ ಸೈನಿಕರ ಕಣ್ಮರೆ
ಇಫ್ತಿಕಾರ್ ಚೌಧರಿ, ಜರ್ದಾರಿ ಭೇಟಿ
ಸುಳ್ಳು ಕೆಲಸ ಮಾಡುವುದಿಲ್ಲ - ದಲೈಲಾಮಾ