ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೌದಿ ಅಪಘಾತದಲ್ಲಿ ಭಾರತೀಯರಿಬ್ಬರ ದಹನ
ಸೌದಿ ಅರೇಬಿಯಾದಲ್ಲಿ ಸಂಭವಿಸಿರುವ ಭೀಕರ ಅಪಘಾತವೊಂದರಲ್ಲಿ ಭಾರತೀಯರಿಬ್ಬರು ಸುಟ್ಟು ಕರಕಲಾಗಿದ್ದಾರೆ.

ಮಜ್ಮಾ ಸಮೀಪದ ಜಲಜಿಲ್ ಎಂಬಲ್ಲಿ ರಿಯಾದ್-ಖಾಸಿಮ್ ಹೈವೇಯಲ್ಲಿ ತೈಲ ಟಾಂಕರ್ ಒಂದಕ್ಕೆ ಡಿಕ್ಕಿಹೊಡೆದ ಬಸ್ಸಿಗೆ ಬೆಂಕಿ ಹತ್ತಿಕೊಡಿದ್ದು, ಬಸ್ಸಿನಲ್ಲಿದ್ದ ಈ ಇಬ್ಬರು ಪ್ರಯಾಣಿಕರು ಜೀವಂತ ದಹನವಾಗಿದ್ದಾರೆ.

ಅಪಘಾತದಲ್ಲಿ ಒಟ್ಟು 9 ಮಂದಿ ಸಾವನ್ನಪ್ಪಿದ್ದು, ಇವರಲ್ಲಿ ಭಾರತೀಯರಾದ ಸರ್ಫುದ್ದೀನ್ ಅಹ್ಮದ್ ಹಾಗೂ ಕೆಟಿಬಿ ಫವಾಜ್ ಸೇರಿದ್ದು ಇವರ ದೇಹಗಳು ಗುರುತಿಸಲಾಗದಷ್ಟು ಕರಕಲಾಗಿದೆ. ಬಸ್ಸಿನಲ್ಲಿ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಬಹರೈನ್‌ನ 'ಉಮ್ರಾ' ಯಾತ್ರಿಕರು ಪ್ರಯಾಣಿಸುತ್ತಿದ್ದರು.

ಸತ್ತವರಲ್ಲಿ ನಾಲ್ವರ ದೇಹಗಳು ಗುರುತು ಸಿಗದ ರೀತಿಯಲ್ಲಿ ಸುಟ್ಟುಹೋಗಿದ್ದು, ಮೃತನೊಬ್ಬನನ್ನು ಇನ್ನೂ ಗುರುತಿಸಲು ಸಾಧ್ಯಾವಾಗಿಲ್ಲ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.
ಮತ್ತಷ್ಟು
ನೂತನ ಪ್ರಧಾನಿಯಿಂದ ಕಾಶ್ಮೀರ ಕಹಳೆ
ಉಗ್ರರೊಂದಿಗೆ ಪಾಕ್ ಪ್ರಧಾನಿ ಮಾತುಕತೆಗೆ ಒಲವು
ಸಾಂಪ್ರದಾಯಿಕ ವಿದೇಶಾಂಗ ನೀತಿ: ಓಬಾಮಾ
ಭಾರತಕ್ಕೆ ಮೊದಲ ಭೇಟಿ:ಭೂತಾನ್ ಪ್ರಧಾನಿ
ಪಾಕ್‌: ಕರ್ತವ್ಯಕ್ಕೆ ಹೆದರಿದ 50 ಪೊಲೀಸರ ವಜಾ
ಅಮೆರಿಕದಲ್ಲಿ ಭಾರತೀಯ ಸೈನಿಕರ ಕಣ್ಮರೆ