ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಮಾನ ಅಪಘಾತ:ಐದು ಮಂದಿ ಸಾವು
ವಿಮಾನವೊಂದು ವಾಸದ ಮನೆಗಳಿರುವ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಅಪ್ಪಳಿಸಿದ್ದರಿಂದ ಮನೆ ಸಂಪೂರ್ಣ ನಾಶವಾಗಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿಮಾನದಲ್ಲಿ ಇಬ್ಬರು ಪೈಲಟ್‌ಗಳಿದ್ದು ಮೂವರು ಪ್ರಯಾಣಿಕರು ಪಯಣಿಸುತ್ತಿದ್ದು ನಿಯಂತ್ರಣ ಕಳೆದುಕೊಂಡು ಅಪ್ಪಳಿಸಿದ್ದರಿಂದ ಉಂಟಾದ ಬೆಂಕಿಯ ಜ್ವಾಲೆಯಲ್ಲಿ ಐವರುಪ್ರಯಾಣಿಕರು ಬೆಂದು ಹೋಗಿರಬಹುದು ಎಂದು ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಮನೆಯಲ್ಲಿದ್ದ ವ್ಯಕ್ತಿಗಳಲ್ಲಿ ಯಾರು ಸಾವನ್ನಪ್ಪಿಲ್ಲ ಎನ್ನುವುದು ಖಚಿತವಾಗಿದೆ ಎಂದು ಲಂಡನ್ ಅಗ್ನಿಶಾಮಕ ದಳದ ಅಧಿಕಾರಿ ಜಿಮ್ ಬಾಸ್ಕ್ರಾನ್ ತಿಳಿಸಿದ್ದಾರೆ.

ಅಪಘಾತ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದು ತನಿಖೆ ಸಂಪೂರ್ಣವಾಗುವವರೆಗೂ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಸಂಸ್ಥೆಗೆ ಸೇರಿದ ವಿಮಾನ ದಕ್ಷಿಣ ಲಂಡನ್‌ನ ಕೆಂಟ್‌ ಬಳಿ ವಾಸದ ಮನೆಯೊಂದರ ಮೇಲೆ ಸಾಯಂಕಾಲ ಸುಮಾರು 7 ಗಂಟೆಗೆ ಅಪ್ಪಳಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಸೌದಿ ಅಪಘಾತದಲ್ಲಿ ಭಾರತೀಯರಿಬ್ಬರ ದಹನ
ನೂತನ ಪ್ರಧಾನಿಯಿಂದ ಕಾಶ್ಮೀರ ಕಹಳೆ
ಉಗ್ರರೊಂದಿಗೆ ಪಾಕ್ ಪ್ರಧಾನಿ ಮಾತುಕತೆಗೆ ಒಲವು
ಸಾಂಪ್ರದಾಯಿಕ ವಿದೇಶಾಂಗ ನೀತಿ: ಓಬಾಮಾ
ಭಾರತಕ್ಕೆ ಮೊದಲ ಭೇಟಿ:ಭೂತಾನ್ ಪ್ರಧಾನಿ
ಪಾಕ್‌: ಕರ್ತವ್ಯಕ್ಕೆ ಹೆದರಿದ 50 ಪೊಲೀಸರ ವಜಾ