ಟಿಬೆಟ್ ಚೀನಾ ದೇಶದ ಭಾಗವೆಂದು ಟಿಬೆಟ್ ಧಾರ್ಮಿಕ ಗುರು ದಲೈಲಾಮಾ ಹೇಳಿಕೆ ನೀಡಿದಲ್ಲಿ ಚೀನಾ ಸರಕಾರ ಅವರೊಂದಿಗೆ ಮಾತುಕತೆ ನಡೆಸಲು ಸದಾ ಸಿದ್ದವಿದೆ ಎಂದು ಚೀನಾದ ಪ್ರಧಾನಿ ವೆನ್ ಜಿಯಾಬೊ ಹೇಳಿದ್ದಾರೆ.
ಟಿಬೆಟ್ ಹಾಗೂ ಥೈವಾನ್ ದೇಶಗಳು ಚೀನಾ ದೇಶದ ಆಧೀನಕ್ಕೆ ಒಳಪಟ್ಟಿದ್ದು ಚೀನಾ ದೇಶದ ಸಂವಿಧಾನಕ್ಕೆ ಅನುಗುಣವಾಗಿ ಲಾಮಾ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
ದಲೈಲಾಮಾ ಟಿಬೆಟ್‌ನ್ನು ಚೀನಾ ದೇಶದ ಅವಿಭಾಜ್ಯ ಅಂಗವೆಂದು ಹೇಳಿಕೆ ನೀಡದೇ ಇರುವುದು ಪ್ರತ್ಯೇಕ ರಾಷ್ಟ್ರಕ್ಕಾಗಿ ಹೋರಾಟ ಮಾಡುತ್ತಿಲ್ಲ ಎಂದು ಚೀನಾ ದೇಶಕ್ಕೆ ಮನವರಿಕೆ ಮಾಡುವಲ್ಲಿ ವಿಫಲವಾಗಿದ್ದರಿಂದ ಮಾತುಕತೆ ಮುಂದಕ್ಕೆ ಹೋಗಿವೆ ಎಂದು ಚೀನಾ ಸರಕಾರ ಸ್ಪಷ್ಟಪಡಿಸಿದೆ.
ಸುರಕ್ಷತೆ ಮತ್ತು ಶಾಂತಿಗಾಗಿ ನಾವು ಟಿಬೆಟ್‌ಗೆ ಸಂಪೂರ್ಣ ಅರ್ಥಪೂರ್ಣ ಸ್ವಾಯತ್ತತೆ ಬಯಸುತ್ತೇವೆ ಹೊರತು ಪ್ರತ್ಯೇಕ ರಾಷ್ಟ್ರವಲ್ಲ ಎಂದು ದಲೈಲಾಮಾ ಹೇಳಿದ್ದಾರೆ.
|