ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇರಾಕ್‌: ರಕ್ತಪಾತ ನಿಲ್ಲಿಸಲು ಮೌಲ್ವಿ ಕರೆ
ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸುವಂತೆ ತಮ್ಮ ಬೆಂಬಲಿಗರಿಗೆ ಶಿಯಾ ಮೌಲ್ವಿ ಮೊಖ್ತದಾ -ಅಲ್-ಸದ್ರ್ ಕರೆ ನೀಡಿದ್ದಾರೆ.

ಇರಾಕಿ ಜನತೆ ರಕ್ತಪಾತವನ್ನು ನಿಲ್ಲಿಸಿ, ಇರಾಕ್‌ನ ಸ್ವಾತಂತ್ರ ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡು ಬರುವ ಅಗತ್ಯವಿದೆ. ಆದ್ದರಿಂದ ನಮ್ಮ ಬೆಂಬಲಿಗರಿಗೆ ಹೋರಾಟವನ್ನು ನಿಲ್ಲಿಸಲು ಆದೇಶಿಸಲಾಗಿದೆ ಎಂದು ದೇಶದ ಪವಿತ್ರ ನಗರವಾದ್ ನಜಾಫ್‌ನಿಂದ ಮೌಲ್ವಿ ಕರೆ ನೀಡಿದ್ದಾರೆ.

ಇರಾಕ್‌ನ ದಕ್ಷಿಣ ಕರಾವಳಿ ತೀರದ ಬಾಸ್ರಾ ಪ್ರದೇಶದಲ್ಲಿ ಕಳೆದ ಆರು ದಿನಗಳಿಂದ ಶಿಯಾ ಹೋರಾಟಗಾರರು ಮತ್ತು ಇರಾಕಿ ಸೇನಾಪಡೆಗಳ ಮಧ್ಯೆ ಭೀಕರ ಘರ್ಷಣೆ ನಡೆದು 270 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮೌಲ್ವಿ ಅವರ ಹೇಳಿಕೆ ಹೊರಬಿದ್ದಿದೆ.

ಇರಾಕ್‌ನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಅಂತ್ಯಗೊಳಿಸಲು ತಮ್ಮ ಮೇಲೆ ನ್ಯಾಯಬದ್ದ ಜವಾಬ್ದಾರಿಯಿರುವುದರಿಂದ ಹೋರಾಟವನ್ನು ನಿಲ್ಲಿಸಿ ರಕ್ತಪಾತವನ್ನು ಕೊನೆಗಾಣಿಸುವಂತೆ ಕರೆ ನೀಡಿರುವುದಾಗಿ ಮೌಲ್ವಿ ಮೊಖ್ತದಾ-ಅಲ್-ಸದ್ರ್ ಹೇಳಿದ್ದಾರೆ.

ಮೌಲ್ವಿ ಮೊಖ್ತದಾ-ಅಲ್-ಸದ್ರ್ ಅವರ ಹೇಳಿಕೆಯನ್ನು ಇರಾಕ್ ಸರಕಾರದ ವಕ್ತಾರರಾದ ಅಲಿ-ಅಲ್-ದಬಾಗ್ ಸ್ವಾಗತಿಸಿದ್ದಾರೆ.
ಮತ್ತಷ್ಟು
ಟಿಬೆಟ್ ಚೀನಾದ ಭಾಗವೆಂದು ಲಾಮಾ ಸಮ್ಮತಿಸಲಿ
ವಿಮಾನ ಅಪಘಾತ:ಐದು ಮಂದಿ ಸಾವು
ಸೌದಿ ಅಪಘಾತದಲ್ಲಿ ಭಾರತೀಯರಿಬ್ಬರ ದಹನ
ನೂತನ ಪ್ರಧಾನಿಯಿಂದ ಕಾಶ್ಮೀರ ಕಹಳೆ
ಉಗ್ರರೊಂದಿಗೆ ಪಾಕ್ ಪ್ರಧಾನಿ ಮಾತುಕತೆಗೆ ಒಲವು
ಸಾಂಪ್ರದಾಯಿಕ ವಿದೇಶಾಂಗ ನೀತಿ: ಓಬಾಮಾ