ಅಮೆರಿಕ ಮಿತ್ರಪಡೆಗಳ ವೈಮಾನಿಕ ದಾಳಿಯಲ್ಲಿ ಬಾಗ್ದಾದ್‌ನ 41 ಅಪರಾಧಿಗಳು ಸಾವನ್ನಪ್ಪಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.
ಬಾಗ್ದಾದ್‌ನ ಪೂರ್ವಿಯ ಹಾಗೂ ಆಗ್ನೆಯ ಭಾಗದಲ್ಲಿ ಶಿಯಾ ಮೌಲ್ವಿ ಮೊಖ್ತದಾ ಅಲ್-ಸದ್ರ್ ಬೆಂಬಲಿತ ಖಾಸಗಿ ಸೇನೆಯ ವಿರುದ್ದ ಅಮೆರಿಕ ಮಿತ್ರಪಡೆಗಳು ವೈಮಾನಿಕ ದಾಳಿ ನಡೆಸಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನಾವಕ್ತಾರರು ತಿಳಿಸಿದ್ದಾರೆ.
ಇರಾಕಿ ಸೇನಾಪಡೆ ಹಾಗೂ ಶಿಯಾ ಉಗ್ರರ ನಡುವೆ ಬಾಸ್ರಾದಲ್ಲಿ ಕಳೆದ ಆರು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಹೋರಾಟದಲ್ಲಿ 320ಕ್ಕೂ ಹೆಚ್ಚು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.
ಅಮೆರಿಕದ ಮಿತ್ರಪಡೆಗಳು ಉಗ್ರರ ವಿರುದ್ದ ಭಾರಿ ಕಾರ್ಯಾಚರಣೆ ನಡೆಸುತ್ತಿದ್ದು ಉಗ್ರರು ಶರಣಾಗುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಸೇನಾ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
|