ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೂತನ 24 ಸಚಿವರಿಗೆ ಮುಷರಫ್ ಪ್ರಮಾಣವಚನ
ಪಾಕಿಸ್ತಾನದ ನೂತನ ಪ್ರಧಾನಿ ಯೂಸೂಫ್ ರಝಾ ಗಿಲಾನಿ ಸಂಪುಟದ 24 ಸಚಿವರಿಗೆ ಅಧ್ಯಕ್ಷ ಪರ್ವೇಜ್ ಮುಷರಫ್ ಪ್ರಮಾಣವಚನ ಭೋಧಿಸಿದರು.

ಒಟ್ಟು 24 ಸಚಿವರಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಗೆ ಸೇರಿದ 11 ಸಚಿವರು ಹಾಗೂ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಮುಸ್ಲಿಮ್ ಲೀಗ್ (ನವಾಜ್) ಪಕ್ಷದ 9 ಸಚಿವರು ಪ್ರಮಾಣವಚನ ಸ್ವೀಕರಿಸಿದರು. ಇನ್ನುಳಿದ ನಾಲ್ಕುಸಚಿವ ಸ್ಥಾನಗಳಲ್ಲಿ ಒಬ್ಬ ಸ್ವತಂತ್ರ ಅಭ್ಯರ್ಥಿ ಹಾಗೂ ಮೂವರು ಸರಕಾರಕ್ಕೆ ಬೆಂಬಲ ನೀಡಿದ ಪಕ್ಷಗಳಿಂದ ಸಚಿವ ಸ್ಥಾನವನ್ನು ಅಲಂಕರಿಸಿದ್ದಾರೆ.

ಪಾಕ್ ಅಧ್ಯಕ್ಷ ಮುಷರಫ್ ಅನಧಿಕೃತ ಅಧ್ಯಕ್ಷ ಎಂದು ಪರಿಗಣಿಸಿದ ಷರೀಫ್ ಪಕ್ಷದ ಸಚಿವರು ಪ್ರತಿಭಟನಾ ಸೂಚಕವಾದ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಪ್ರಮಾಣ ವಚನವನ್ನು ಸ್ವೀಕರಿಸಿದರು.

ನಿರೀಕ್ಷೆಯಂತೆ ಷರೀಫ್ ಪಕ್ಷದ ಇಶಾಖ್ ದಾರ್ ಹಣಕಾಸು ಸಚಿವರಾಗಿದ್ದು, ಭುಟ್ಟೋ ಪಕ್ಷದ ಶಾಹ್ ಮೆಹಮೂದ್ ಖುರೇಶಿ ವಿದೇಶಾಂಗ ಸಚಿವ ಖಾತೆ, ರಕ್ಷಣಾ ಖಾತೆಯನ್ನು ಚೌಧರಿ ಅಹ್ಮದ್ ಮುಖ್ತಾರ್ ವಹಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಸಂಪುಟವನ್ನು ವಿಸ್ತರಿಸಲಾಗುವುದು ಎಂದು ಸರಕಾರಿ ಮೂಲಗಳು ತಿಳಿಸಿವೆ.
ಮತ್ತಷ್ಟು
ವಾಯುದಾಳಿ: 41 ಉಗ್ರರ ಹತ್ಯೆ
ಇರಾಕ್‌: ರಕ್ತಪಾತ ನಿಲ್ಲಿಸಲು ಮೌಲ್ವಿ ಕರೆ
ಟಿಬೆಟ್ ಚೀನಾದ ಭಾಗವೆಂದು ಲಾಮಾ ಸಮ್ಮತಿಸಲಿ
ವಿಮಾನ ಅಪಘಾತ:ಐದು ಮಂದಿ ಸಾವು
ಸೌದಿ ಅಪಘಾತದಲ್ಲಿ ಭಾರತೀಯರಿಬ್ಬರ ದಹನ
ನೂತನ ಪ್ರಧಾನಿಯಿಂದ ಕಾಶ್ಮೀರ ಕಹಳೆ