ಅರಬ್ ದೇಶಗಳ ಒಕ್ಕೂಟ ಶೃಂಗಕ್ಕಾಗಿ ನೀಡಿದ ತಮ್ಮ ಸಂದೇಶದಲ್ಲಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಬಾನ್ ಕೀ ಮೂನ್, ಜವಾಬ್ದಾರಿಯುತವಾಗಿ ನಡೆದುಕೊಳ್ಳುವಂತೆ ಅರಬ್ ರಾಷ್ಟ್ರಗಳಿಗೆ ಕರೆ ನೀಡಿದ್ದು, ಗಾಜಾ ಸುತ್ತಮುತ್ತಲಿನ ಹಿಂಸಾಚಾರ ತಡೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಪ್ಯಾಲೆಸ್ತೀನ್ ಅಧ್ಯಕ್ಷ ಅಬ್ಬಾಸ್ ಮತ್ತು ಇಸ್ರೇಲ್ ಪ್ರಧಾನ ಮಂತ್ರಿ ಒಲ್ಮೆರ್ಟ್ ನಡುವೆ ಪ್ರಸ್ತುತ ನಡೆಯುತ್ತಿರುವ ಸೂಕ್ಷ್ಮ ರಾಜಕೀಯ ಪ್ರಕ್ರಿಯೆಗೆ ನಿಮ್ಮ ಬಾಗಿದಾರಿಕೆ ಅಗತ್ಯವಾಗಿದೆ ಎಂದು ಬಾನ್ ಅರಬ್ ರಾಷ್ಟ್ರಗಳಿಗೆ ತಿಳಿಸಿದ್ದಾರೆ.
ಕಳೆದ ನಾಲ್ಕು ತಿಂಗಳು ಅಧ್ಯಕ್ಷನನ್ನು ಹೊಂದಿರದ ಲೆಬನಾನಿನಲ್ಲಿನ ರಾಜಕೀಯ ಬಿಕ್ಕಟ್ಟನ್ನು ಉಲ್ಲೇಖಿಸುತ್ತಾ ಬಾನ್, ಈ ಪರಿಸ್ಥಿತಿ ಇನ್ನು ಮುಂದುವರಿಯಬಾರದು ಎಂದು ತಿಳಿಸಿದ್ದಾರೆ. ಎಲ್ಲಾ ಲೆಬನಾನ್ ನಾಯಕರು ಪ್ರಸಕ್ತ ಬಿಕ್ಕಟ್ಟಿನಿಂದ ದೇಶವನ್ನು ಮೇಲೆತ್ತಲು ಮೊದಲಿಗೆ ತಮ್ಮ ದೇಶದ ಹಾಗೂ ಜನರ ಹಿತಾಸಕ್ತಿಯೆಡೆಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಮತ್ತು ಈ ವಿಷಯವಾಗಿ ಅರಬ್ ಒಕ್ಕೂಟದ ಉದ್ಯಮಶೀಲತೆಯನ್ನು ಅಳವಡಿಸುವಂತೆ ಕೋರಿದರು.
ಇದೇ ವೇಳೆ ಅವರು, ಫೆಬ್ರವರಿ 2005ರಲ್ಲಿನ ಮಾಜಿ ಲೆಬನಾನ್ ಪ್ರಧಾನಿ ರಪಿಕ್ ಹರಿರಿ ಹತ್ಯೆಗೆ ಹೊಣೆಗಾರರಾದವರನ್ನು ವಿಚಾರಣೆ ನಡೆಸುವ ನಿಟ್ಟಿನಲ್ಲಿನ ವಿಶೇಷ ನ್ಯಾಯಾಧಿಕರಣ ಸ್ಥಾಪನೆಯಲ್ಲಿ ಸಾಧಿಸಲಾದ ಮಹತ್ವದ ಬೆಳವಣಿಗೆಯ ಬಗ್ಗೆ ಉದಾಹರಿಸಿದರು.
|