ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಖ್ಯ ನ್ಯಾಯಾಧೀಶ ಹುದ್ದೆಯಲ್ಲಿದ್ದೇನೆ-ಚೌಧರಿ
: ತಾನು ಈಗಲೂ ತನ್ನನ್ನು ಮುಖ್ಯ ನ್ಯಾಯಾಧೀಶನೆಂದು ಪರಿಗಣಿಸುತ್ತಿದ್ದೇನೆ ಆದರೆ ತನ್ನ ಜವಬ್ದಾರಿಯನ್ನು ಪಾಲಿಸಲು ಸಂಸತ್ತಿನ ಜನಾದೇಶವನ್ನು ಗೌರವಿಸಲು ಸುಪ್ರೀಂ ಕೋರ್ಟ್ ಹೋಗುವುದನ್ನು ತಾನು ತಡೆ ಹಿಡಿದಿದ್ದೇನೆ ಎಂದು ಪದಚ್ಯುತ ಅಗ್ರ ನ್ಯಾಯಾಧೀಶರಾದ ಇಪ್ರಿಕಾರ್ ಚೌಧರಿ ತಿಳಿಸಿದ್ದಾರೆ.

ತಾನೂ ಸಂವಿಧಾನದ ಪ್ರಕಾರ ಈಗಲೂ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶನಾಗಿದ್ದು, ಓರ್ವ ಮುಖ್ಯ ನ್ಯಾಯಾಧೀಶನಾಗಿ ತನ್ನ ಕರ್ತವ್ಯ ನಿರ್ವಹಣೆಗೆ ಯಾರಿಂದಲೂ ನಿರ್ಬಂಧ ಹೇರಲು ಸಾಧ್ಯವಿಲ್ಲ. ಸಂಸತ್ತಿನ ಜನಾದೇಶವನ್ನು ಗೌರವಿಸುವ ಸಲುವಾಗಿ ತನ್ನ ಬಿಡುಗಡೆಯ ನಂತರ ತಾನು ಜವಬ್ದಾರಿ ನಿರ್ವಹಿಸಲು ಹೋಗಲಿಲ್ಲ ಎಂದು ವಕೀಲರ ಅಧಿವೇಶನವನ್ನು ಉದ್ದೇಶಿಸಿ ಹೇಳಿದರು.

ಮುಶರಫ್ ಪರ ಪಿಎಂಎಲ್-ಕ್ಯುಗೆ ಹೀನಾಯ ಸೋಲು ಉಣಿಸಿದ್ದ ಫೆಬ್ರವರಿ 18ರ ಚುನಾವಣೆ ಫಲಿತಾಂಶವನ್ನು ಒಂದು ಮೌನ ಕ್ರಾಂತಿ ಎಂದು ಬಣ್ಣಿಸಿರುವ ಇಪ್ತಿಕಾರ್, ತಾವು ತಮ್ಮ ಗುರಿಯನ್ನು ಬಹುಬೇಗ ತಲುಪಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಮೌನ ಕ್ರಾಂತಿ ದೇಶದಲ್ಲಿನ ರಾಜಕೀಯ ಸಂಸ್ಕೃತಿಯನ್ನು ಸಂಪೂರ್ಣವಾಗಿ ಬದಲಾಯಿಸಿತು ಎಂಬ ಅವರ ಉಲ್ಲೇಖ ಪಾಕ್‌ನ ಜಿಯೋ ಸುದ್ಧಿ ಓನ್‍‌ಲೈನ್‌ನಲ್ಲಿ ವರದಿಯಾಗಿದೆ.

ನ್ಯಾಯಾಂಗ ವ್ಯವಸ್ಥೆಯ ಪುನಸ್ಥಾಪನೆಗೆ ಬೆಂಬಲ ಪಡೆಯುವ ನಿಟ್ಟಿನಲ್ಲಿ ಇಪ್ತಿಕಾರ್ ಚೌಧರಿ ನಿನ್ನೆ ಪಾಕ್‌ನಾದ್ಯಂತ ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದು, ಬಲುಚಿಸ್ತಾನ್ ಪ್ರಾಂತ್ಯದ ತಮ್ಮ ತವರು ಪಟ್ಟಣದಲ್ಲಿ ಇಪ್ತಿಕಾರ್‌ಗೆ ನೂರಾರು ವಕೀಲರು ಸ್ವಾಗತ ನೀಡಿದರು.
ಮತ್ತಷ್ಟು
ಜಿಯಾ ಪುತ್ರನ ವಿರುದ್ದ ಆರೋಪಪಟ್ಟಿ ದಾಖಲು
ಹಿಂಸಾಚಾರ ತಡೆ: ಅರಬ್ ರಾಷ್ಟ್ರಗಳಿಗೆ ಬಾನ್ ಮನವಿ
ನೂತನ 24 ಸಚಿವರಿಗೆ ಮುಷರಫ್ ಪ್ರಮಾಣವಚನ
ವಾಯುದಾಳಿ: 41 ಉಗ್ರರ ಹತ್ಯೆ
ಇರಾಕ್‌: ರಕ್ತಪಾತ ನಿಲ್ಲಿಸಲು ಮೌಲ್ವಿ ಕರೆ
ಟಿಬೆಟ್ ಚೀನಾದ ಭಾಗವೆಂದು ಲಾಮಾ ಸಮ್ಮತಿಸಲಿ