ಒಬಾಮ ಮತ್ತು ಅವರ ಬೆಂಬಲಿಗರು ತನ್ನನ್ನು ಅಧ್ಯಕ್ಷೀಯ ಸ್ಪರ್ಧೆಯಿಂದ ಹೊರ ನಡೆಯುವಂತೆ ಹೇಳುವ ಮೂಲಕ ಜನರು ಮತದಾನದಿಂದ ದೂರ ಉಳಿಯುವಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಡೆಮೊಕ್ರೇಟಿಕ್ ಸೆನೆಟರ್ ಹಿಲರಿ ಕ್ಲಿಂಟನ್ ಆರೋಪಿಸಿದ್ದಾರೆ.
ಆದರೆ ಈ ಕಡೆ ಒಬಾಮ ಚುನಾವಣೆ ಪ್ರಚಾರ ಕ್ಲಿಂಟನ್‌ರ ಈ ಆರೋಪವನ್ನು ತಳ್ಳಿಹಾಕಿದ್ದು, ಇದು ಸಂಪೂರ್ಣವಾಗಿ ನಗೆಪಾಟಲಿನ ವಿಷಯವಾಗಿದೆ ಎಂದು ಹೇಳಿದೆ.
ಮುಂದಿನ ಸ್ಪರ್ಧೆ ನಡೆಯಲಿರುವ ರಾಜ್ಯಗಳಲ್ಲಿನ ಸರಣಿ ಟಿವಿ ಸಂದರ್ಶನಗಳಲ್ಲಿ ಕ್ಲಿಂಟನ್ ತಮ್ಮ ಸ್ಪರ್ಧೆಯಲ್ಲಿನ ಮುಂದುವರಿಕೆಯ ಬಗ್ಗೆ ಭರವಸೆ ನೀಡಿದ್ದು, ಪಕ್ಷದ ಅಧ್ಯಕ್ಷೀಯ ನಾಮನಿರ್ದೇಶಿತನನ್ನು ಆರಿಸುವಲ್ಲಿ ಈ ರಾಜ್ಯಗಳು ಪಾತ್ರವಹಿಸುವುದನ್ನು ಒಬಾಮ ಮತ್ತು ಅವರ ಬೆಂಬಲಿಗರು ಇಚ್ಚಿಸುತ್ತಿಲ್ಲ ಎಂದು ಆರೋಪಿಸಿದರು.
ಸೆನೆಟರ್ ಒಬಾಮರ ಅನೇಕ ಬೆಂಬಲಿಗರು ಈ ಸ್ಪರ್ಧೆಯನ್ನು ಅಂತ್ಯಗೊಳಿಸಲು ಇಚ್ಚಿಸುತಿದ್ದಾರೆ ಕಾರಣ ಜನರು ಮತಹಾಕುವುದನ್ನು ಅವರು ಇಚ್ಚಿಸುತ್ತಿಲ್ಲ ಎಂದು ಮೊಂನ್ಟನದಲ್ಲಿ ಟಿವಿ ಸಂದರ್ಶನವೊಂದರಲ್ಲಿ ತಿಳಿಸಿದರು. ತಾವು ಇದರ ವಿರುದ್ಧವಾಗಿ ಯೋಚಿಸುತ್ತಿದ್ದು, ಜನರು ಮತಹಾಕುವುದನ್ನು ತಾನು ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಮೊಂನ್ಟನದಲ್ಲಿ ಜೂನ್ 3ರಂದು ಪ್ರಾಥಮಿಕ ನಡೆಯಲಿದೆ. ಕ್ಲಿಂಟನ್ ಇದೇ ರೀತಿಯ ಸಂದರ್ಶನಾ ಹೇಳಿಕೆಯನ್ನು ಇಂಡಿಯಾನ ಮತ್ತು ನಾರ್ತ್ ಕೆರೊಲೀನಾದಲ್ಲಿ ನೀಡಿದ್ದಾರೆ. ಈ ರಾಜ್ಯಗಳಲ್ಲಿ ಮೇ 6 ರಂದು ಪ್ರಾಥಮಿಕ ನಡೆಯಲಿದೆ.
|