ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಲೈ ಲಾಮ ಆರೋಪಕ್ಕೆ ಚೀನಾ ಖಂಡನೆ
ಇತ್ತೀಚಿಗಿನ ಲಾಸಾ ಹಿಂಸಾಚಾರದಲ್ಲಿ ಸ್ವತಃ ಬೀಜಿಂಗ್ ಪಾತ್ರವಿರಬಹುದು ಎಂಬ ದಲೈ ಲಾಮರ ಆರೋಪವನ್ನು ಚೀನಾ ಖಂಡಿಸಿದ್ದು, ಇದು ಅವರ ಪಾಪ ಪ್ರಜ್ಞೆಯನ್ನು ತೋರಿಸುತ್ತದೆ ಎಂದು ಹೇಳಿದೆ ಮತ್ತು ಅವರು ವದಂತಿ ಹಾಗೂ ಮೋಸವನ್ನು ಉಪಯೋಗಿಸುತ್ತಿದ್ದಾರೆ ಎಂದು ಆರೋಪಿಸಿದೆ.

ದಲೈ ಲಾಮರ ಈ ವದಂತಿಯಿಂದ ಘಟನೆಯ ಸತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ. ಬದಲಾಗಿ ಇದು ಕೇವಲ ಅವರ ಪಾಪಾ ಪ್ರಜ್ಞೆಯನ್ನು ತೋರಿಸುತ್ತದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಿಯಾಂಗ್ ಯು ತಿಳಿಸಿದ್ದಾರೆ.

ನೂರಾರು ಚೀನಾ ಜನರು ಬೌಧ ಸನ್ಯಾಸಿಗಳ ಬಟ್ಟೆಯನ್ನು ಪಡೆದಿರುವ ಬಗ್ಗೆ ತಾವು ಕೇಳಿದ್ದು, ಸೈನಿಕರು ಸನ್ಯಾಸಿಗಳ ಬಟ್ಟೆ ಧರಿಸಿದ್ದಾರೆ. ಹಾಗಾಗಿ ಅವರು ಬೌಧ ಸನ್ಯಾಸಿಗಳ ತರ ಕಾಣುತ್ತಾರೆ. ಆದರೆ ಅವರು ಉಪಯೋಗಿಸಿದ ಕತ್ತಿಗಳು ಚೀನಾದ್ದಾಗಿದೆ ಎಂದು ದಲೈ ಲಾಮ ನವ ದೆಹಲಿಯಲ್ಲಿ ಶನಿವಾರದಂದು ತಿಳಿಸಿದ್ದರು.

ಟಿಬೆಟ್‌ನಲ್ಲಿ ನಡೆದ ಹಿಂಸಾಚಾರ ಘಟನೆಯ ಸತ್ಯಾಸತ್ಯತೆ ಎಲ್ಲರ ಕಣ್ಣಮುಂದೆ ಇದೆ ಮತ್ತು ಇದು ಸಾಭೀತಾಗಿದೆ ಹಾಗಾಗಿ ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಜಿಯಾಂಗ್ ಉಲ್ಲೇಖ ಅಧಿಕೃತ ಕ್ಸಿನ್ಹುವ ಸುದ್ಧಿ ಸಂಸ್ಥೆ ವರದಿ ಮಾಡಿದೆ.
ಮತ್ತಷ್ಟು
ಜನತೆಯನ್ನು ವಂಚಿಸುವ ತಂತ್ರ-ಕ್ಲಿಂಟನ್
ಮುಖ್ಯ ನ್ಯಾಯಾಧೀಶ ಹುದ್ದೆಯಲ್ಲಿದ್ದೇನೆ-ಚೌಧರಿ
ಜಿಯಾ ಪುತ್ರನ ವಿರುದ್ದ ಆರೋಪಪಟ್ಟಿ ದಾಖಲು
ಹಿಂಸಾಚಾರ ತಡೆ: ಅರಬ್ ರಾಷ್ಟ್ರಗಳಿಗೆ ಬಾನ್ ಮನವಿ
ನೂತನ 24 ಸಚಿವರಿಗೆ ಮುಷರಫ್ ಪ್ರಮಾಣವಚನ
ವಾಯುದಾಳಿ: 41 ಉಗ್ರರ ಹತ್ಯೆ