ಟಿಬೆಟ್‌ನಲ್ಲಿ ನಡೆದ ಹಿಂಸಾಚಾರ ಕುರಿತಂತೆ ಮುಂಬರುವ ಬೀಜಿಂಗ್ ಒಲಿಂಪಿಕ್ ಪಂದ್ಯಾವಳಿಯ ಮೇಲೆ ಒತ್ತಡ ಹೇರುವುದು ಸರಿಯಲ್ಲ.ಒಲಿಂಪಿಕ್ ಜಾಗತಿಕ ಮಟ್ಟದ ಕ್ರೀಡಾಕೂಟವಾಗಿದ್ದು ರಾಜಕೀಯ ಚರ್ಚೆಯ ವೇದಿಕೆಯಲ್ಲ ಎಂದು ಚೀನಾ ಸ್ಪಷ್ಟಪಡಿಸಿದೆ.
ಕಳೆದ ಒಲಿಂಪಿಕ್ ಪಂದ್ಯಾವಳಿಯಲ್ಲಿ ಕೆಲ ದೇಶಗಳು ಭಾಗವಹಿಸಿದ್ದರೇ ಕೆಲ ದೇಶಗಳು ಬಹಿಷ್ಕರಿಸಿದ್ದವು. ಇದು ಜಾಗತಿಕ ಮಟ್ಟದ ಕ್ರೀಡಾಕೂಟದಲ್ಲಿ ಸಾಮಾನ್ಯ ಸಂಗತಿ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಜಿಯಾಂಗ್ ಯಾ ತಿಳಿಸಿದ್ದಾರೆ.
ಟಿಬೆಟ್ ಸಮಸ್ಯೆ ಕುರಿತಂತೆ ಟಿಬೆಟ್ ಧಾರ್ಮಿಕ ಗುರು ದಲೈಲಾಮಾ ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಪಾಶ್ಚಾತ್ಯ ರಾಷ್ಟ್ರಗಳು ಚೀನಾ ದೇಶವನ್ನು ಒತ್ತಾಯಿಸಿದ್ದವು.
ಅಮೆರಿಕ ಸಂಸತ್ತಿನ ಸಭಾಪತಿ ನ್ಯಾನ್ಸಿ ಪೆಲೊಸಿ ಅವರು ಬೀಜಿಂಗ್ ಒಲಿಂಪಿಕ್ ಪಂದ್ಯಾವಳಿಯ ಉಧ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಬೇಕು ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಜಿಯಾಂಗ್ ಅವರು ಪ್ರತಿಕ್ರೀಯೆ ನೀಡಿದ್ದಾರೆ.
|