ಕಳೆದ ಒಂದು ದಶಕದಿಂದ ಭಾರತ ಸೇರಿದಂತೆ ಜಗತ್ತಿನ ಇತರ ರಾಷ್ಟ್ರಗಳ ಜನತೆ ಬ್ರಿಟನ್‌ಗೆ ಆಗಮಿಸುತ್ತಿರುವುದರಿಂದ ಬ್ರಿಟನ್ ವ್ಯವಹಾರದಲ್ಲಿ ಏರಿಕೆ ಕಂಡುಬಂದಿದ್ದು, ವಲಸೆಯಲ್ಲಿ ವಾರ್ಷಿಕ ಮಿತಿಯಿರಬೇಕು ಎನ್ನುವ ಸಲಹೆಗಳನ್ನು ಪ್ರಧಾನಿ ಗೊರ್ಡಾನ್ ಬ್ರೌನ್ ತಿರಸ್ಕರಿಸಿದ್ದಾರೆ.
ಭಾರತ ಸೇರಿದಂತೆ ಜಗತ್ತಿನ ಇತರ ರಾಷ್ಟ್ರಗಳ ಜನತೆ ಬ್ರಿಟನ್‌ಗೆ ಆಗಮಿಸುತ್ತಿರುವುದರಿಂದ ಬ್ರಿಟನ್ ವ್ಯವಹಾರದಲ್ಲಿ 6 ಬಿಲಿಯನ್ ಪೌಂಡ್‌ಗಳಷ್ಟು ಬೃಹತ್ ಪ್ರಮಾಣದ ಆದಾಯ ಬರುತ್ತಿದೆ ಎಂದು ಹೇಳಿದ್ದಾರೆ.
ನೂತನ ವಲಸೆ ನೀತಿಯಿಂದಾಗಿ ಪರಿಣಿತ ಉದ್ಯೋಗಿಗಳನ್ನು ಮಾತ್ರ ದೇಶಕ್ಕೆ ವಲಸೆ ಬರಲು ಅನುಮತಿ ನೀಡಲಾಗಿದೆ ಎಂದು ಸಂಸದೀಯ ಸಮಿತಿಯ ವರದಿಗೆ ಪ್ರತಿಕ್ರಯಿಸಿದರು.
ಬ್ರಿಟನ್ ದೇಶದ ವ್ಯಾಪಾರ ವಹಿವಾಟು ಸಂಸ್ಥೆಗಳು ಕಾರ್ಮಿಕ ಕೊರತೆಯನ್ನು ಎದುರಿಸುತ್ತಿದ್ದು,ನೂತನ ವಲಸೆ ನೀತಿಯಿಂದಾಗಿ ಪರಿಣಿತ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿರುವ 10ಸಾವಿರ ರೆಸ್ಟಾರೆಂಟ್‌ಗಳಲ್ಲಿ ಕಾರ್ಮಿಕ ಕೊರತೆಯನ್ನು ಎದುರಿಸುತ್ತಿರುವ ಬಗ್ಗೆ ಸುದ್ದಿಗಾರರು ಪ್ರಶ್ನೆಯನ್ನು ಕೇಳಿದಾಗ ದೇಶದಲ್ಲಿ ಲಭ್ಯವಿರುವ ಜನರಿಗೆ ತರಬೇತಿಯನ್ನು ನೀಡಲು ಸಿದ್ದತೆ ನಡೆಸಿದ್ದು ಪರಿಣಿತರಲ್ಲದ ಕಾರ್ಮಿಕರನ್ನು ದೇಶದೊಳಗೆ ಪ್ರವೇಶಿಸುವ ಅನುಮತಿಗೆ ತಡೆ ನೀಡಲಾಗಿದೆ ಎಂದು ಬ್ರೌನ್ ಹೇಳಿದ್ದಾರೆ.
|