ದೇಶದ ಉತ್ತರ ಭಾಗದಲ್ಲಿ ನಡೆದ ಸೇನಾಪಡೆಗಳ ಹಾಗೂ ಉಗ್ರರ ಮಧ್ಯೆ ನಡೆದ ಘರ್ಷಣೆಯಲ್ಲಿ 13 ತಮಿಳು ಉಗ್ರರು ಸೇರಿದಂತೆ ಒಬ್ಬ ಸೈನಿಕ ಹತನಾಗಿದ್ದಾನೆ ಎಂದು ಸೇನಾಮೂಲಗಳು ತಿಳಿಸಿವೆ.
ಮನ್ನಾರ್ ಜಿಲ್ಲೆಯ ಉತ್ತರ ಭಾಗದಲ್ಲಿ ಸೇನಾಪಡೆಗಳ ಮತ್ತು ಉಗ್ರರ ನಡುವೆ ಭಾರಿ ಕದನ ಆರಂಭವಾಗಿ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಉತ್ತರೀಯ ಪ್ರಾಂತ್ಯದ ಯುದ್ದಭೂಮಿಯಲ್ಲಿ ಪತ್ರಕರ್ತರ ಪ್ರವೇಶಕ್ಕೆ ಸರಕಾರ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಸಂಪೂರ್ಣ ಮಾಹಿತಿ ಲಭ್ಯವಾಗುವ ಸಾಧ್ಯತೆಗಳಿಲ್ಲವೆಂದು ಮಾಧ್ಯಮಗಳು ಅಸಮಧಾನ ವ್ಯಕ್ತಪಡಿಸಿವೆ.ಘರ್ಷಣೆ ಕುರಿತಂತೆ ಉಗ್ರರಿಂದ ಯಾವುದೇ ಪ್ರತಿಕ್ರೀಯೆ ಲಭ್ಯವಾಗಿಲ್ಲವೆಂದು ಮೂಲಗಳು ತಿಳಿಸಿವೆ.
|