ಪಾಕಿಸ್ತಾನದ ಮಾನವ ಹಕ್ಕುಗಳ ಖಾತೆಯ ಮಾಜಿ ಸಚಿವ ಅನ್ಸಾರ್ ಬ್ರೂನಿ ಭಾರತಕ್ಕೆ ಭೇಟಿ ನೀಡಿದ್ದು, ಪಾಕ್‌ನಲ್ಲಿ ಕೈದಿಯಾದ ಸರ್ಬಜಿತ್ ಸಿಂಗ್ ಅವರ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಕಳೆದ 15 ವರ್ಷಗಳಿಂದ ಭಯೋತ್ಪಾದನೆ ಆರೋಪದ ಮೇಲೆ ಬಂಧಿತನಾಗಿದ್ದು ಎಪ್ರಿಲ್ ಅಂತ್ಯಕ್ಕೆ ಗಲ್ಲು ಶಿಕ್ಷೆಯನ್ನು ಮುಂದೂಡಲಾಗಿದೆ.
ಸರಬ್‌ಜಿತ್ ಕುಟುಂಬಕ್ಕೆ ಬ್ರೂನಿ ಹೊಸ ಆಶಾಕಿರಣವಾಗಿದ್ದು, ಬುರ್ನೆ ಮಹತ್ವಪೂರ್ಣ ವ್ಯಕ್ತಿಯಾಗಿದ್ದಾರೆ. ಸಹೋದರ ಸರಬ್‌ಜಿತ್ ಬಿಡುಗಡೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸರಬ್‌ಜಿತ್ ಸಹೋದರಿ ದಲ್‌ಬೀರ್ ಕೌರ್ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿರುವ ಸರಬ್‌ಜಿತ್ ಕುಟುಂಬ ಪಾಕಿಸ್ತಾನದ ಮಾನವಹಕ್ಕುಗಳ ಖಾತೆಯ ಮಾಜಿ ಸಚಿವ ಅನ್ಸಾರ್ ಬ್ರೂನಿ ಅವರನ್ನು ಆತ್ಮಿಯತೆಯಿಂದ ಸ್ವಾಗತಿಸಿದರು.
ಸರಬ್‌ಜಿತ್ ಕುಟುಂಬ ಬ್ರೂನಿ ಅವರಿಗೆ ಸರಬ್‌ಜಿತ್ ಅಮಾಯಕ ಎನ್ನುವುದಕ್ಕೆ ಅನೇಕ ದಾಖಲೆಗಳನ್ನು ಸಲ್ಲಿಸಿದರು. ಮಾರ್ಚ್ ತಿಂಗಳಲ್ಲಿ ಭಾರತದ ಕೈದಿ ಕಾಶ್ಮಿರ್ ಸಿಂಗ್ ಅವರನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡುವಲ್ಲಿ ಅನ್ಸಾರಿ ಮಹತ್ತರ ಪಾತ್ರವಹಿಸಿದ್ದರು.
ನಾನು ಆಶಾವಾದಿ ಹಾಗಾಗಿ ಸರಬ್‌ಜಿತ್ ಅಮಾಯಕ ಎಂದು ಸಾಬೀತುಪಡಿಸುವ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇನೆ.ಮುಂದಿನ ಕ್ರಮದ ಬಗ್ಗೆ ಸದ್ಯಕ್ಕೆ ಹೇಳಲಾರೆ ಎಂದು ಅನ್ಸಾರಿ ತಿಳಿಸಿದ್ದಾರೆ.
|