ಶ್ರೀಲಂಕಾದ ಉತ್ತರ ಭಾಗದಲ್ಲಿರುವ ಮುಲೈತ್ತುವು ಪ್ರದೇಶದ ಮೇಲೆ ವಾಯುಸೇನೆ ದಾಳಿ ನಡೆಸಿದಾಗ ಸುಮಾರು 58 ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ.
ಉಗ್ರರ ಭದ್ರಕೋಟೆಯಾಗಿದ್ದ ಮುಲೈತ್ತವು ಪ್ರದೇಶದಲ್ಲಿ ವಾಯುಸೇನೆ ದಾಳಿ ನಡೆಸಿ ಉಗ್ರರು ನಡೆಸುತ್ತಿದ್ದ ಗುಪ್ತಸಭೆಯ ಶಿಬಿರದ ಮೇಲೆ ದಾಳಿ ನಡೆಸಿ ನಾಶಪಡಿಸಿದೆ. ಕಾರ್ಯಾಚರಣೆಯಲ್ಲಿ ಇಬ್ಬರು ನಾಗರಿಕರು ಮೃತರಾಗಿದ್ದಾರೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಕಲ್ಲಿಯಾದಾಂಚನ್ ಪ್ರದೇಶದಲ್ಲಿ ನಡೆದ ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಮುನ್ನಾರ್ ಫ್ರಂಟ್‌ನ ಉತ್ತರ ಭಾಗದಲ್ಲಿ ಸೇನಾಪಡೆಗಳ ಹಾಗೂ ಉಗ್ರರ ನಡುವಿನ ಘರ್ಷಣೆಯಲ್ಲಿ 13 ಉಗ್ರರು ಸಾವನ್ನಪ್ಪಿದ್ದಾರೆ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಾಯುಸೇನೆ ನಿಖರವಾಗಿ ಉಗ್ರರ ಗುಪ್ತಶಿಬಿರದ ಮೇಲೆ ದಾಳಿ ನಡೆಸಲಾಯಿತು ಎಂದು ಯುದ್ದವಿಮಾನಗಳ ಪೈಲಟ್‌ಗಳು ತಿಳಿಸಿದ್ದಾರೆ ಎಂದು ವಾಯುದಳದ ವಕ್ತಾರರಾದ ವಿಂಗ್‌ಕಮಾಂಡರ್ ಆಂಡ್ರೂ ವಿಜಯ್‌ಸೂರ್ಯ ಹೇಳಿದ್ದಾರೆ.
|