ದೇಶದಲ್ಲಿರುವ ಉಸ್ತುವಾರಿ ಮಧ್ಯಂತರ ಸರಕಾರ ಪ್ರಸಕ್ತ ತಿಂಗಳಿನಲ್ಲಿ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ನಡೆಸಲು ಸರಕಾರ ಸಿದ್ದತೆ ನಡೆಸುತ್ತಿದ್ದು, ಯಾವುದೇ ಸಮಯದಲ್ಲಿ ಮಾತುಕತೆ ಆರಂಭವಾಗಲಿದೆ ಎಂದು ಮುಖ್ಯಸಲಹೆಗಾರ ಸಯ್ಯಿದ ಫಯಿಮ್ ಮುನೈಮ್ ತಿಳಿಸಿದ್ದಾರೆ.
ಶೀಘ್ರದಲ್ಲಿ ಮಾತುಕತೆ ನಡೆಸಲು ಸರಕಾರ ವೇದಿಕೆಯನ್ನು ಸಿದ್ದಪಡಿಸಿ ದಿನಾಂಕವನ್ನು ನಿಗದಿಗೊಳಿಸುತ್ತಿದ್ದು,ಮಾತುಕತೆಯ ವಿವರ ಹಾಗೂ ಸಭೆಯಲ್ಲಿ ಯಾವ ರಾಜಕೀಯ ಪಕ್ಷಗಳಿರಬೇಕು ಎನ್ನುವುದನ್ನು ಅಂತ್ಯಗೊಳಿಸಲಿದೆ ಎಂದು ಹೇಳಿದ್ದಾರೆ.
ದೇಶದಲ್ಲಿರುವ ಮಧ್ಯಂತರ ಸರಕಾರ ಹಾಗೂ ರಾಜಕೀಯ ಪಕ್ಷಗಳೊಂದಿಗಿನ ಮಾತುಕತೆಯ ನಿಯಮನಾವಳಿಗಳನ್ನು ನಿರ್ಧರಿಸಲಾಗಿದೆ ಎಂದು ಕಳೆದ ವಾರ ಸಂಪರ್ಕ ಸಲಹೆಗಾರರಾದ ಗುಲಾಮ್ ಖಾದರ್ ಹೇಳಿಕೆ ನೀಡಿರುವುದನ್ನು ಸ್ಮರಿಸಬಹುದು.
|