ಚೀನಾ ಟಿಬೆಟ್ ಮೇಲೆ ನಡೆಸುತ್ತಿರುವ ದೌರ್ಜನ್ಯದ ವಿರುದ್ದ ನೀಡುತ್ತಿರುವ ಬೆಂಬಲವನ್ನು ಜಾಗತಿಕ ಸಮುದಾಯ ಮುಂದುವರಿಸಬೇಕು ಎಂದು ಟಿಬೆಟ್ ಧಾರ್ಮಿಕ ಗುರು ದಲೈಲಾಮಾ ತಿಳಿಸಿದ್ದಾರೆ.
ಟಿಬೆಟ್‌ಗೆ ಅಗತ್ಯವಿರುವ ಸ್ವಾಯತ್ತತೆ ಪಡೆಯಲು ಸತ್ಯಾಗ್ರಹ ಮತ್ತು ಪ್ರತಿಭಟನೆಗಳು ಟಿಬೆಟ್ ಜನತೆಯ ನಿಯಮವಾಗಿವೆ. ಜಿಂಗೈ, ಗಾನಸು, ಸಿಚುವಾನ್ ,ಯನುನ್ ಪ್ರಾಂತ್ಯಗಳ ಜನತೆ ಸ್ವಾಯತ್ತತೆಗಾಗಿ ಒತ್ತಾಯಿಸುತ್ತಿದ್ದಾರೆ ಎಂದು ಲಾಮಾ ಹೇಳಿದ್ದಾರೆ.
ಚೀನಾ ಸರಕಾರ ಟಿಬೆಟ್ ರಾಜಧಾನಿ ಲಾಸಾದಲ್ಲಿ ಹೆಚ್ಚುವರಿ ಸೇನಾಪಡೆಗಳನ್ನು ಆಯೋಜಿಸಿ ಹಿಂಸಾಚಾರ ನಡೆಸಿದ್ದಲ್ಲದೇ ಪ್ರತಿಭಟನೆ ನಡೆಸುತ್ತಿದ್ದ ಸ್ಥಳವನ್ನು ಕೂಡಾ ನಿಷೇಧ ಹೇರಿ ದೌರ್ಜನ್ಯ ಎಸಗಿದ್ದಾರೆ ಎಂದು ಲಾಮಾ ಆರೋಪಿಸಿದ್ದಾರೆ.
ಜಾಗತಿಕ ನಾಯಕರು ಹಾಗೂ ಸಂಸತ್ ಸದಸ್ಯರು ಸಂಘ ಸಂಸ್ಥೆಗಳು ತಮ್ಮ ಬೆಂಬಲವನ್ನು ಮುಂದುವರಿಸಬೇಕು ಎಂದು ಧಾರ್ಮಿಕ ಗುರು ದಲೈಲಾಮಾ ಮನವಿ ಮಾಡಿದ್ದಾರೆ.
|