ವಿಶ್ವಸಂಸ್ಥೆ ಮುಸ್ಲಿಮ್ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಜಾಗತಿಕ ಉಗ್ರಗಾಮಿ ಸಂಘಟನೆಯ ಉಪಮುಖ್ಯಸ್ಥ ಅಯಿಮಾನ್-ಅಲ್-ಜವಾಹರಿ ಹೇಳಿಕೆಯನ್ನು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಖಂಡಿಸಿದ್ದಾರೆ.
ವಿಶ್ವಸಂಸ್ಥೆಯಿಂದ ಮುಸ್ಲಿಮ್ ರಾಷ್ಟ್ರಗಳಿಗೆ ಯಾವು ಸಹಾಯ ದೊರೆಯುವುದಿಲ್ಲ ಎಂದು ಜವಾಹರಿ ನೀಡಿದ ಹೇಳಿಕೆಯನ್ನು ಅಪ್ಪಟ ಸುಳ್ಳಿನ ಕಂತೆ ಹಾಗೂ ಒಪ್ಪುವಂತಹದಲ್ಲ ಎಂದು ರೋಮೇನಿಯಾ ಪ್ರವಾಸದಲ್ಲಿರುವ ಬಾನ್-ಕಿ ಮೂನ್ ತಿಳಿಸಿದ್ದಾರೆ.
ಅಫಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜಾಯಿ ಹಾಗೂ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ನಡೆಸಿದ ಮಾತುಕತೆಯಲ್ಲಿ ಮುಸ್ಲಿಮ್ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಿದ್ದಾರೆ
ವಿಶ್ವಸಂಸ್ಥೆಯ ಭದ್ರತಾ ಸಮಿತಿ 24 ಗಂಟೆಗಳ ಕಾಲ ವಿಶ್ವದಾದ್ಯಂತ ನಿಗಾವಹಿಸಿದ್ದು ಯಾವುದೇ ಭಯೋತ್ಪಾದಕ ಚಟುವಟಿಕೆಗಳನ್ನು ಸದೆಬಡೆಯಲು ಸಿದ್ದವಾಗಿದೆ ಎಂದು ವಿಶ್ವಸಂಸ್ಥೆಯ ವಕ್ತಾರೆ ಮಾರಿಯಾ ಹೇಳಿದ್ದಾರೆ.
|