ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಬ್‌ಜಿತ್‌ ಸಿಂಗ್‌ಗೆ ಬರ್ನೆ ಬೆಂಬಲ
ಸರಬ್‌ಜಿತ್ ಸಿಂಗ್ ಪ್ರಕರಣದಲ್ಲಿ ತಮ್ಮಿಂದಾದ ಸಹಾಯವನ್ನು ಮಾಡಲು ಸಿದ್ದವಾಗಿದ್ಜು ಅಂತಿಮ ನಿರ್ಧಾರ ರಾಷ್ಟ್ರಾಧ್ಯಕ್ಷ ಮುಷರಫ್ ಅವರಿಗೆ ಸೇರಿದ ವಿಷಯವಾಗಿದೆ ಎಂದು ಪಾಕಿಸ್ತಾನದ ಮಾನವ ಹಕ್ಕುಗಳ ಖಾತೆಯ ಮಾಜಿ ಸಚಿವರಾದ ಅನ್ಸಾರ್ ಬರ್ನೆ ಅವರು ತಿಳಿಸಿದ್ದಾರೆ.

ಬರ್ನೆ ಸರಬ್‌ಜಿತ್ ಸಿಂಗ್ ಅಮಾಯಕ ಎನ್ನುವ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಲ್ಲದೇ ಭಾರತದಲ್ಲಿರು ಪಾಕ್ ಕೈದಿಗಳನ್ನು ಭೇಟಿ ಮಾಡಿದರು.

ಸರಬ್‌ಜಿತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಅಧ್ಯಯನ ನಡೆಸುತ್ತಿದ್ದು, ಇನ್ನು ಹೆಚ್ಚಿನ ಸರಕಾರಿ ದಾಖಲೆಗಳನ್ನು ನೀಡುವಂತೆ ತಮ್ಮ ಅಧಿಕಾರಿಗಳಿಗೆ ಆದೇಶ ನೀಡಬೇಕು. ಇದರಿಂದ ಅಧ್ಯಕ್ಷ ಮುಷರಫ್ ಅವರಿಗೆ ಸರಬ್‌ ಬಿಡುಗಡೆ ಮಾಡಲು ಸಹಾಯಕವಾಗುತ್ತದೆ ಎಂದು ಬರ್ನೆ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಮನವಿ ಮಾಡಿದ್ದಾರೆ.

ಸರಬ್‌ಜಿತ್‌ಗೆ ನೀಡಲಾದ ಗಲ್ಲು ಶಿಕ್ಷೆ ಬದಲಿಗೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವ ಅಧಿಕಾರ ರಾಷ್ಟ್ರಧ್ಯಕ್ಷ ಮುಷರಫ್ ಅವರು ಹೊಂದಿದ್ದಾರೆ ಎಂದು ಬರ್ನೆ ಹೇಳಿದ್ದಾರೆ.
ಮತ್ತಷ್ಟು
ಜವಾಹರಿ ಹೇಳಿಕೆಗೆ ಬಾನ್ ಖಂಡನೆ
ಜಾಗತಿಕ ಬೆಂಬಲಕ್ಕೆ ಲಾಮಾ ಒತ್ತಾಯ
ರಾಜಕೀಯ ಪಕ್ಷಗಳೊಂದಿಗೆ ಸರಕಾರ ಮಾತುಕತೆ
ಶ್ರೀಲಂಕಾ: 58 ಉಗ್ರರ ಸಾವು
ಪಾಕ್: ಸೇನಾಮುಖ್ಯಸ್ಥರಾಗಿ ಆಸಿಫ್ ನೇಮಕ
ಸರಬ್‌ಜಿತ್ ಕುಟುಂಬಕ್ಕೆ ಬ್ರೂನಿ ಭೇಟಿ