ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆತ್ಮಹತ್ಯಾ ದಾಳಿ :15 ಮಂದಿ ಸಾವು
ಉಗ್ರರ ಗುಂಡಿಗೆ ಬಲಿಯಾದ ಸುನ್ನಿ ಪಂಗಡದ ಪೊಲೀಸ್ ಪೇದೆಯ ಶವಸಂಸ್ಕಾರದಲ್ಲಿ ಆತ್ಮಾಹುತಿ ಗುಂಪಿನ ಸದಸ್ಯ ತನ್ನನ್ನು ತಾನು ಸ್ಪೋಟಿಸಿಕೊಂಡ ಹಿನ್ನೆಲೆಯಲ್ಲಿ 15 ಮಂದಿ ಸಾವನ್ನಪ್ಪಿದ್ದು,8 ಮಂದಿಗೆ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉತ್ತರ ಬಾಗ್ದಾದ್‌ನಿಂದ 95 ಕಿ.ಮಿ. ದೂರದಲ್ಲಿರುವ ದಿಯಾಲಾ ಪ್ರಾಂತ್ಯದ ಸದಿಯಾ ಪಟ್ಟಣದಲ್ಲಿ ಸೊಂಟಕ್ಕೆ ಕಟ್ಟಿಕೊಂಡಿದ್ದ ಬೆಲ್ಟ್‌ನಲ್ಲಿ ಬಾಂಬ್ ಹುದುಗಿಸಿಕೊಂಡಿದ್ದು ಜನರು ಅಂತ್ಯಸಂಸ್ಕಾರದಲ್ಲಿ ತೊಡಗಿದ ಸಂದರ್ಭದಲ್ಲಿ ಆತ್ಮಾಹುತಿ ದಾಳಿಯ ಸದಸ್ಯ ಸ್ಪೋಟಿಸಿಕೊಂಡಿದ್ದರಿಂದಭಾರಿ ಅನಾಹುತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣದಲ್ಲಿರುವ ಬಾಸ್ರಾ ನಗರದಲ್ಲಿ ಅಮೆರಿಕ ಹಾಗೂ ಇರಾಕಿ ಸೇನಾಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ 7 ಉಗ್ರರನ್ನು ಹತ್ಯೆ ಮಾಡಿದ್ದಲ್ಲದೇ 16 ಮಂದಿಯನ್ನು ಬಂಧಿಸಿದ್ದಾರೆ ಎಂದು ಅಮೆರಿಕ ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.

ಮೃತರಾದವರಲ್ಲಿ ಹೆಚ್ಚಿನವರು ಮೃತ ಪೊಲೀಸ್ ಪೇದೆಯ ಸಂಬಂಧಿಕರಾಗಿದ್ದಾರೆಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತಷ್ಟು
ಸರಬ್‌ಜಿತ್‌ ಸಿಂಗ್‌ಗೆ ಬುರ್ನೆ ಬೆಂಬಲ
ಜವಾಹರಿ ಹೇಳಿಕೆಗೆ ಬಾನ್ ಖಂಡನೆ
ಜಾಗತಿಕ ಬೆಂಬಲಕ್ಕೆ ಲಾಮಾ ಒತ್ತಾಯ
ರಾಜಕೀಯ ಪಕ್ಷಗಳೊಂದಿಗೆ ಸರಕಾರ ಮಾತುಕತೆ
ಶ್ರೀಲಂಕಾ: 58 ಉಗ್ರರ ಸಾವು
ಪಾಕ್: ಸೇನಾಮುಖ್ಯಸ್ಥರಾಗಿ ಆಸಿಫ್ ನೇಮಕ