ಭಾರತ ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಮುಂಬರುವ ಕೆಲ ತಿಂಗಳಲ್ಲಿ ಸುಖಾಂತ್ಯವಾಗುವ ಭರವಸೆಯಿದ್ದು,ಅಣು ಒಪ್ಪಂದ ಜಾರಿಗೆ ಬರಲು ಇನ್ನು ಸಮಯವಿದೆ ಎಂದು ಅಮೆರಿಕದ ಉಪವಕ್ತಾರ ಟಾಮ್ ಕ್ಯಾಸೆ ಆಶಾವಾದವನ್ನು ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಅಣು ಒಪ್ಪಂದ ಕುರಿತಂತೆ ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಭಾರತ-ಅಮೆರಿಕ ನಡುವೆ ನಾಗರಿಕ ಪರಮಾಣು ಒಪ್ಪಂದವಾಗುವ ಸಾಧ್ಯತೆಗಳಿವೆ ಎಂದು ಟಾಮ್ ಕ್ಯಾಸೆ ಹೇಳಿದ್ದಾರೆ
ಅಣು ಒಪ್ಪಂದ ಜಾರಿಗೆ ಬರುವುದರಿಂದ ಕೇವಲ ಭಾರತಕ್ಕೆ ಮಾತ್ರ ಅನೂಕುಲವಲ್ಲ. ಅಮೆರಿಕ ದೇಶಕ್ಕೂ ಅನುಕೂಲವಾಗಲಿದೆ. ನಾಗರಿಕ ಪರಮಾಣು ಹೊಂದಿದ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಗಲಿದೆ ಎಂದು ಕ್ಯಾಸೆ ಹೇಳಿದ್ದಾರೆ.
ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಅಣು ಒಪ್ಪಂದ ಕುರಿತಂತೆ ಅನೇಕ ಸಮಸ್ಯೆಗಳಿದ್ದು, ಹೊಂದಾಣಿಕೆ ರೂಪದಲ್ಲಿ ಸಾಗಬೇಕಾಗಿರುವುದರಿಂದ ಸಮಯದ ಅವಶ್ಯಕತೆಯಿದೆ ಎಂದು ಟಾಮ್ ಅಭಿಪ್ರಾಯಪಟ್ಟಿದ್ದಾರೆ.
|