16 ಚಮಚಾಗಳನ್ನು ತಮ್ಮ ಮುಖದ ಮೇಲಿರಿಸಿಕೊಂಡ 9 ವರ್ಷದ ಬ್ರಿಟಿಷ್ ಬಾಲಕನೊಬ್ಬ ಹೊಸ ವಿಶ್ವದಾಖಲೆ ಸ್ಥಾಪಿಸಿದ್ದಾನೆ.
ಡೇವನ್‌ನ ಟಾಟ್ನಿಸ್ ಎಂಬಲ್ಲಿನ ಜೋ ಆಲಿಸನ್ ಎಂಬ ಹುಡುಗ ತನ್ನ ಹಣೆ, ಮೂಗು, ಗಲ್ಲ ಮತ್ತು ಗದ್ದದ ಮೇಲೆ 16 ಚಮಚಗಳನ್ನು ಇರಿಸಿಕೊಳ್ಳುವ ಮೂಲಕ 15 ಚಮಚಾಗಳ ದಾಖಲೆಯನ್ನು ಮುರಿದಿದ್ದಾನೆ.
ಎರಡು ವರ್ಷಗಳ ಹಿಂದೆ ಸೋದರ ಸಂಬಂಧಿಯೊಬ್ಬ, ಮೂಗಿನ ಮೇಲೆ ಒಂದು ಚಮಚಾವನ್ನು ಇರಿಸಿಕೊಂಡು ತೋರಿಸು ಎಂಬುದಾಗಿ ಸವಾಲೊಡ್ಡಿದಂದಿನಿಂದ ಆಲಿಸನ್ ಈ ವಿಚಿತ್ರ ಹವ್ಯಾಸವನ್ನು ರೂಢಿಸಿಕೊಂಡಿದ್ದ.
ಸಾಕಷ್ಟು ಅಭ್ಯಾಸ ನಡೆಸಿದ ಬಳಿಕ, ಹಣೆಯಲ್ಲಿ ಐದು, ಮೂಗಿನ ಮೇಲೆ ಒಂದು, ಗದ್ದದಿಂದ ಎರಡು, ಎರಡೂ ಕಿವಿಯಲ್ಲಿ ಒಂದೊಂದು, ಎರಡೂ ಗಲ್ಲಗಳಲ್ಲಿ ತಲಾ ಮೂರು-ಹೀಗೆ 16 ಚಮಚಾಗಳನ್ನು ಮುಖ ಭಾಗದ ಮೇಲೆ ಇರಿಸಿಕೊಂಡು ಈ ಬಾಲಕ ಸಾಧನೆ ಮಾಡಿದ್ದಾನೆ.
ಈ ಹಿಂದಿನ ದಾಖಲೆ ಮಾಡಿದ್ದು 2004ರ ಮೇ ತಿಂಗಳಲ್ಲಿ, 16ರ ಹರೆಯದ ಒಬ್ಬ ಅಮೆರಿಕದ ಹುಡುಗ.
|