ಯುದ್ಧಜರ್ಜರಿತ ಅಪ್ಘಾನಿಸ್ತಾನದಲ್ಲಿ, ಭಾರತೀಯ ಸೋಪ್ ಒಪೇರಾ ಕಾರ್ಯಕ್ರಮಗಳನ್ನು ಬಿತ್ತರಿಸಬಾರದು ಎಂದು ಅಫ್ಘಾನ್ ಸರಕಾರವು ಖಾಸಗೀ ಟಿವಿ ವಾಹಿನಿಗಳಿಗೆ ಆದೇಶ ನೀಡಿದೆ. ಕಾರ್ಯಕ್ರಮಗಳು ಇಸ್ಲಾಮೇತರವಾಗಿರುವ ಕಾರಣ ಏಪ್ರಿಲ್ 15ರೊಳಗಾಗಿ ಈ ಧಾರಾವಾಹಿಗಳ ಪ್ರಸಾರವನ್ನು ನಿಲ್ಲಿಸಬೇಕು ಎಂದು ಅದು ಹೇಳಿದೆ.
ಸಂಸದರು ಮತ್ತು ಧರ್ಮ ಗುರುಗಳ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಫ್ಘಾನಿಸ್ತಾನದ ಸಾಂಸ್ಕೃತಿಕ ಮತ್ತು ಮಾಹಿತಿ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಈ ಕಾರ್ಯಕ್ರಮಗಳ ಕುರಿತು ಸಾಕಷ್ಟು ದೂರುಗಳಿರುವ ಬಂದಿವೆ ಎಂದೂ ಅವರು ನುಡಿದರು.
ಅಫ್ಘಾನಿಸ್ತಾನದಲ್ಲಿ ಆರು ಜನಪ್ರಿಯ ಸೋಪ್ ಒಪೇರಾ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದು, ಇವುಗಳು ಟಿವಿಗಳಿಗೆ ಸಾಕಷ್ಟು ಆದಾಯ ತಂದಿಟ್ಟಿವೆ.
ಪಾಶ್ಟೋ ಮತ್ತು ಪರ್ಸಿಯನ್ ಭಾಷೆಗೆ ಡಬ್ ಮಾಡಿದ ಆರು ಭಾರತೀಯ ಕಾರ್ಯಕ್ರಮಗಳನ್ನು, ಟೋಲೋ, ಆರಿಯನ ಮತ್ತು ಶಂಶದ್ ಸೇರಿದಂತೆ ಆಫ್ಘಾನಿನ ಹಲವು ಖಾಸಗಿ ಟಿವಿ ವಾಹಿನಿಗಳು ಪ್ರಸಾರ ಮಾಡುತ್ತಿವೆ.
|