ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಷರಫ್ ವಜಾಕ್ಕೆ ನೂತನ ಕಾನೂನು ಜಾರಿ-ನವಾಜ್
ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ಪಾಕಿಸ್ತಾನ ಪೀಪಲ್ಸ್ ಪಾರ್ಟಿ ನೇತೃತ್ವದ ಸಮ್ಮಿಶ್ರ ಸರಕಾರ ರಾಷ್ಟ್ರಧ್ಯಕ್ಷರನ್ನು ಅಧಿಕಾರದಿಂದ ಹೊರಹಾಕಲು ಸಂಸತ್ತಿನಲ್ಲಿ ನೂತನ ಕಾನೂನು ಜಾರಿಗೆ ತರಲು ನಿರ್ಧರಿಸಿದೆ ಎಂದು ಪಾಕಿಸ್ತಾನ ಮುಸ್ಲಿಮ್ ಲೀಗ್ (ನವಾಜ್) ಮುಖಂಡ ನವಾಜ್ ಷರೀಫ್ ಹೇಳಿದ್ದಾರೆ.

ಕಳೆದ ಎಂಟು ವರ್ಷಗಳ ಅಧಿಕಾರವಧಿಯಲ್ಲಿ ಮುಷರಫ್ ಅನೇಕ ಸಂಸ್ಥೆಗಳನ್ನು ಹಾಳುಗೆಡುವಿದ್ದರಿಂದ ಅವರು ದೇಶದ ಉನ್ನತ ಸ್ಥಾನದಲ್ಲಿರಲು ನೈತಿಕ ಹಕ್ಕಿಲ್ಲ. ಮುಷರಫ್ ಅವರನ್ನು ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಹೊರಹಾಕಲು ಸಂಸತ್ತಿನಲ್ಲಿ ನಬತನ ಕಾಯ್ದೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಹೇಳಿದ್ದಾರೆ.

ನಾನು ಮುಷರಫ್ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ದವಿಲ್ಲ ಹಾಗೂ ಮೃದು ಧೋರಣೆಯನ್ನು ತೋರಿಸಲು ಸಿದ್ದವಿಲ್ಲವೆಂದು ಹೇಳಿದ ನವಾಜ್ ಸರ್ವಾಧಿಕಾರಿಗೆ ಪ್ರಜಾಪ್ರಭುತ್ವದಲ್ಲಿ ಯಾವುದೇ ಸ್ಥಾನವಿಲ್ಲವೆಂದು ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎನ್ನುವ ಭಾರತದ ಆರೋಪವನ್ನು ತಳ್ಳಿಹಾಕಿದ ಷರೀಫ್ ಪಾಕಿಸ್ತಾನದಲ್ಲಿ ಯಾವುದೇ ರೀತಿಯ ಭಯೋತ್ಪಾದಕ ತರಬೇತಿ ಶಿಬಿರಗಳಿಲ್ಲ. ಭಾರತದ ಗೃಹಸಚಿವಾಲಯದ ವರದಿಯಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿದ್ದಾರೆ.

ಕಾಶ್ಮಿರ ಸಮಸ್ಯೆ ಇತ್ಯರ್ಥಕ್ಕಾಗಿ ಉಭಯ ದೇಶಗಳು ವೀಸಾ ಮುಕ್ತ ನೀತಿಯನ್ನು ಜಾರಿಗೆ ತರುವುದರಿಂದ ಭಾಂದವ್ಯ ವೃದ್ಧಿಗೆ ಸಹಾಯಕವಾಗುತ್ತದೆ ಎಂದು ಹೇಳಿದ್ದಾರೆ.
ಮತ್ತಷ್ಟು
ಅಫ್ಘಾನ್‌: ಭಾರತೀಯ ಧಾರಾವಾಹಿಗಳಿಗೆ ಕತ್ತರಿ
'ಚಮಚಾಗಿರಿ': 9ರ ಬಾಲಕ ವಿಶ್ವ ದಾಖಲೆ!
ದೊರೆ ಅರಮನೆ ತ್ಯಜಿಸಬೇಕು: ಪ್ರಚಂಡ
ಅಣು ಒಪ್ಪಂದ ಸುಖಾಂತ್ಯ :ಅಮೆರಿಕ ಆಶಾವಾದ
ದುಬೈನಲ್ಲಿ ಭಾರತೀಯ ಅಂಗಡಿಗಳಿಗೆ ಬೆಂಕಿ
ಆತ್ಮಹತ್ಯಾ ದಾಳಿ :15 ಮಂದಿ ಸಾವು