ಹಾಲಿವುಡ್ ಸಿನಿಮಾರಂಗದ ದಂತಕಥೆಯಾಗಿದ್ದ ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ನಟ ಚಾರ್ಲಟನ್ ಹೆಸ್ಟನ್ (84) ಅವರು ವಿಧಿವಶರಾಗಿರುವುದಾಗಿ ಭಾನುವಾರದಂದು ಕುಟುಂಬದ ಮೂಲಗಳು ತಿಳಿಸಿವೆ.
ಬೆನ್ ಹುರ್ ಹಾಗೂ ಪೊರ್‌ಟ್ರಾಯ್ಡ್ ಮೊಸೆಸ್, ಮೈಕೆಲ್ ಏಂಜೆಲೋ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಹೀರೋ ಆಗಿ ಪ್ರಪಂಚದಾದ್ಯಂತ ಹೆಸರು ಗಳಿಸಿ, 1950-60ರ ದಶಕದಲ್ಲಿ ಮನೆಮಾತಾಗಿದ್ದ ಚಾರ್ಲಟನ್ ಹೆಸ್ಟನ್ ಅವರು 1959ರಲ್ಲೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗಳಿಸಿದ್ದರು.
ನಟ ಚಾರ್ಲಟನ್ ಹೆಸ್ಟನ್ ಅವರು ಬೆವರ್ಲಿ ಹಿಲ್ಸ್‌ನಲ್ಲಿರುವ ತಮ್ಮ ಮನೆಯಲ್ಲಿ ಶನಿವಾರದಂದು ರಾತ್ರಿ ಮೃತಪಟ್ಟಿರುವುದಾಗಿ ಹೆಸ್ಟನ್ ವಕ್ತಾರ ಬಿಲ್ ಪವರ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಅವರು ಪತ್ನಿ ಲಿಡಿಯಾ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಚಾರ್ಲಟನ್ ಹೆಸ್ಟನ್ ಅವರು, 2002ರಲ್ಲಿ ಬುದ್ಧಿಭ್ರಮಣೆಯಿಂದ (ಅರಳು-ಮರಳು) ಬಳಲುತ್ತಿದ್ದರು ಎಂದು ಬಿಲ್ ಪವರ್ಸ್ ವಿವರಿಸಿದ್ದು, ಶನಿವಾರ ರಾತ್ರಿ ಸಾವನ್ನಪ್ಪಿರುವುದಾಗಿ ಹೇಳಿದರು.
ಆಕರ್ಷಕ ಮುಖ ಹಾಗೂ ವಿಶಿಷ್ಟ ಧ್ವನಿಯಿಂದ ಹೆಸ್ಟನ್ ಅವರು ತಮ್ಮ ಅಭಿಮಾನಿಗಳಲ್ಲಿ ಸೂಪರ್‌ಸ್ಟಾರ್ ಆಗಿ ಬೆಳೆದಿದ್ದರು, ಆ ಸಂದರ್ಭದಲ್ಲೇ ಅವರು ಹಾಲಿವುಡ್‌ನ ಖ್ಯಾತನಾಮರಾಗಿ ಹೆಸರು ಗಳಿಸಿದ್ದರು.
|