ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋಂಟೆನ್‌‌‌‌ಗ್ರೊ: ಫಿಲಿಪ್‌ಗೆ ಪ್ರಬಲ ಸ್ಪರ್ಧೆ
ಮೋಂಟೆನ್‌‌‌‌ಗ್ರೊದ ಅಧ್ಯಕ್ಷೀಯ ಚುನಾವಣೆಯ ಮತದಾನವು ಭಾನುವಾರ ಬೆಳಿಗ್ಗೆನಿಂದ ಆರಂಭಗೊಂಡಿದ್ದು, ಅಧ್ಯಕ್ಷಸ್ಥಾನದ ಫಿಲಿಪ್ ವೊಜಾನೋವಿಕ್ ಅವರು ಪ್ರಬಲ ಸ್ಪರ್ಧೆಯನ್ನು ಎದುರಿಸುತ್ತಿರುವುದಾಗಿ ನ್ಯಾಶನಲ್ ಟೆಲಿವಿಷನ್ ವರದಿ ಮಾಡಿದೆ.

ಮೋಂಟೆನ್‌‌‌ಗ್ರೊ ಆಡಳಿತರೂಢ ಡೆಮೋಕ್ರೆಟಿಕ್ ಪಾರ್ಟಿ ಆಫ್ ಸೋಶಿಯಲಿಸ್ಟ್‌‌‌‌ನ (ಡಿಪಿಎಸ್) ವೊಜಾನೋವಿಕ್ ಅವರು, ಕಳೆದ ಎರಡು ದಶಕ ಗಳಿಂದ ಅಧ್ಯಕ್ಷಸ್ಥಾನದಲ್ಲಿದ್ದು, ಈ ಬಾರಿಯೂ ಅವರು ಪ್ರಥಮ ಸುತ್ತಿನಲ್ಲೇ ಶೇ.50ರಷ್ಟು ಮತ ಪಡೆಯುವ ಮೂಲಕ ಗೆಲುವು ಸಾಧಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

ಆದರೆ ಈ ಬಾರಿಯ ಚುನಾವಣೆಯಲ್ಲಿ ಪ್ರಬಲ ವಿರೋಧಪಕ್ಷದ ಅಭ್ಯರ್ಥಿಗಳಾದ ಅನ್‌‌ಡ್ರಿಜಾ ಮ್ಯಾನ್‌‌ಡಿಕ್ ಹಾಗೂ ಭ್ರಷ್ಟಾಚಾರ ವಿರೋಧಿ ಪ್ರಚಾರದ ನೆಬೋಜಾಸಾ ಮೆಡೋಜೆವಿಕ್ ಅವರು ತಾವು ಗೆಲುವು ಸಾಧಿಸುವ ಮೂಲಕ, ವೊಜಾನೋವಿಕ್ ಅವರನ್ನು ಸೋಲಿಸುವ ವಿಶ್ವಾಸದಲ್ಲಿದ್ದಾರೆ.

ಮೋಂಟೆನ್‌‌ಗ್ರೊ ಒಂದು ಚಿಕ್ಕ ದೇಶವಾಗಿದ್ದು, ಇಲ್ಲಿ 650,000 ಜನರಿದ್ದಾರೆ, ಪರ್ವತಶ್ರೇಣಿ ಮತ್ತು ಅಂಟಾರ್ಟಿಕ ಸಮುದ್ರದಿಂದ ಸುತ್ತುವರಿದಿರುವ ಈ ದೇಶ, ದೀರ್ಘಕಾಲದ ಅವಿಭಜಿತ ದೇಶವಾಗಿದ್ದ ಸೆರ್ಬಿಯಾದಿಂದ 2006ರಲ್ಲಿ ಐತಿಹಾಸಿಕವಾಗಿ ಪ್ರತ್ಯೇಕಗೊಂಡಿತ್ತು.

5 ವರ್ಷಗಳ ಕಾಲಾವಧಿಯ ಅಧ್ಯಕ್ಷ ಚುನಾವಣೆಯಲ್ಲಿ ಈ ಹಣಾಹಣಿ ನಡೆಯಲಿದ್ದು, ಭಾನುವಾರ ರಾತ್ರಿ 9ಗಂಟೆಗೆ ಮತದಾನ ಅಂತಿಮಗೊಳ್ಳಲಿದ್ದು, ಒಂದು ಗಂಟೆಯ ನಂತರ ಫಲಿತಾಂಶ ಘೋಷಣೆಯಾಗುವ ಸಾಧ್ಯತೆ ಇದೆ ಇರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಹಾಲಿವುಡ್ ನಟ ಹೆಸ್ಟನ್ ವಿಧಿವಶ
ಉಗ್ರರ ಬಾಂಬ್‌‌ ದಾಳಿಗೆ ಸಚಿವ ಬಲಿ
ಮುಷರಫ್ ವಜಾಕ್ಕೆ ನೂತನ ಕಾನೂನು ಜಾರಿ-ನವಾಜ್
ಅಫ್ಘಾನ್‌: ಭಾರತೀಯ ಧಾರಾವಾಹಿಗಳಿಗೆ ಕತ್ತರಿ
'ಚಮಚಾಗಿರಿ': 9ರ ಬಾಲಕ ವಿಶ್ವ ದಾಖಲೆ!
ದೊರೆ ಅರಮನೆ ತ್ಯಜಿಸಬೇಕು: ಪ್ರಚಂಡ