ಕೆಲವೊಂದು ಉಗ್ರವಾದಿ ಸಂಘಟನೆಗಳೊಂದಿಗೆ ಮಾತುಕತೆಗೆ ಪಾಕಿಸ್ತಾನದ ಹೊಸ ಸರಕಾರವು ಬಯಸುತ್ತಿದ್ದರೂ, ಯಾವುದೇ 'ಭಯೋತ್ಪಾದಕ'ರ ಜತೆ ಮಾತುಕತೆ ನಡೆಸುವುದಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಸೂದ್ ಖುರೇಶಿ ತಿಳಿಸಿದ್ದಾರೆ.
ಇರಾನ್ ಸೇರಿದಂತೆ ಪಾಕಿಸ್ತಾನದ ಅಣ್ವಸ್ತ್ರ ತಂತ್ರಜ್ಞಾನವನ್ನು ಮಾರಾಟ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್ ಅವರ ಬಂಧನದ ಕುರಿತಾಗಿಯೂ ಖುರೇಶಿ ಅವರು ಮೃದು ಧೋರಣೆ ತಳೆದಿದ್ದಾರೆ.
ಪಾಕಿಸ್ತಾನದ ಡಾನ್ ಸುದ್ದಿ ಚಾನೆಲ್‌ಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ಅವರು, ಸರಕಾರವು ಭಯೋತ್ಪಾದಕರು ಎಂದು ಪರಿಗಣಿಸಿರುವವರ ಜೊತೆಗೆ ಮಾತುತೆ ನಡೆಸುವುದಿಲ್ಲ. ಆದರೆ ಉಗ್ರವಾದ ಹತ್ತಿಕ್ಕುವಲ್ಲಿ ರಾಜಕೀಯ ಬದ್ಧತೆಯ ಮೇಲೆ ಇಸ್ಲಾಮಾಬಾದ್ ನಂಬಿಕೆ ಇರಿಸಿದೆ ಎಂದು ಅವರು ಹೇಳಿದ್ದಾರೆ.
|