ಟಿಬೆಟ್‌ನಲ್ಲಿ ಅಹಿಂಸಾತ್ಮಕವಾಗಿ ಪ್ರತಿಭಟಿಸುತ್ತಿರುವ ಟಿಬೆಟ್ ನಾಗರಿಕರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿ ಚೀನಾ ವಿರುದ್ಧ ಅಮೆರಿಕದ ಹೌಸ್ ಆಫ್ ರೆಪ್ರಸಂಟೆಟಿವ್ ಗೊತ್ತುವಳಿ ಅಂಗಿಕಾರ ಮಾಡಿದೆ.
ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಪ್ರತಿಭಟನಾಕಾರರ ಬಿಡುಗಡೆ, ಅಂತಾರಾಷ್ಟ್ರೀಯ ವೀಕ್ಷಕರಿಗೆ ಟಿಬೆಟಿಗೆ ಭೇಟಿ ನೀಡಲು ಅನುಮತಿ ಮತ್ತು ಪತ್ರಕರ್ತರಿಗೆ ಮುಕ್ತ ಅವಕಾಶ ನೀಡಬೇಕು ಎಂದು ಅಂಗಿಕಾರಗೊಂಡ ಮಸೂದೆಯಲ್ಲಿ ಒತ್ತಾಯಿಸಲಾಗಿದೆ.
ಸ್ಪೀಕರ್ ನ್ಯಾನ್ಸಿ ಪೆಲೊಸಿ ಅವರು ಮಂಡಿಸಿದ ಗೊತ್ತುವಳಿಯನ್ನು 413-1 ಮತಗಳ ಅಂತರದದಿಂದ ಸ್ವೀಕರಿಸಲಾಯಿತು.
ಟಿಬೆಟ್‌ನಲ್ಲಿ ಚೀನಾ ಜಾರಿ ಮಾಡಿರುವ ಕಾನೂನು ಮತ್ತು ಆ ಪ್ರಾಂತ್ಯದ ವಿರುದ್ಧ ಅನುಸರಿಸಿಕೊಂಡು ಬರುತ್ತಿರುವ ನೀತಿಗಳ ಪರಿಣಾಮವಾಗಿ ಟಿಬೆಟ್‍ನ ಮೂಲ ನಾಗರಿಕರು ಮಾತನಾಡುವ ಟಿಬೆಟಿಯನ್ ಭಾಷೆ ಮತ್ತು ಅಲ್ಲಿನ ಬೌದ್ಧ ಧರ್ಮ ನಶಿಸಿ ಹೋಗುತ್ತಿದೆ. ಇದಕ್ಕಿಂತ ಅವಮಾನಕಾರಿ ಸಂಗತಿ ಎಂದರೆ ಒಲಿಂಪಿಕ್ ಜ್ಯೋತಿಯು ಟಿಬೆಟ್ ಮೂಲಕ ಸಾಗಲಿ ಎಂದು ಚೀನಾ ಬಯಸುತ್ತಿರುವುದು ಎಂದು ನ್ಯಾನ್ಸಿ ಪೆಲೋಸಿ ಅವರು ಮಂಡಿಸಿದ ಗೊತ್ತುವಳಿಯಲ್ಲಿ ಹೇಳಿದ್ದಾರೆ.
|