ನೂತನ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ವಿದೇಶ ಪ್ರವಾಸಕ್ಕೆ ತೆರಳಿದ ಪಾಕ್ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಕೆಲವೇ ನಿಮಿಷಗಳ ಮುನ್ನ ಪಾಕಿಸ್ತಾನ ಮುಸ್ಲೀಂ ಲೀಗ್ ನವಾಜ್ ಬಣದ ಇಬ್ಬರು ಸಚಿವರನ್ನು ಅಧ್ಯಕ್ಷರ ತಂಡದಿಂದ ಕೈಬಿಟ್ಟು ಚೀನಾಕ್ಕೆ ಆಗಮಿಸಿದ್ದಾರೆ.
ಮುಷರಫ್ ಅವರು ಹೆನ್ನಾನ್ ಪ್ರಾಂತ್ಯದ ಸಾನ್ಯಾ ನಗರಕ್ಕೆ ಬಂದಿಳಿದಿದ್ದು, ಇಲ್ಲಿ ಅವರು ಬೊವೋ ಫೋರಮ್ ಫಾರ್ ಎಷಿಯಾದ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ನಂತರ ಚೀನಾ ಅಧ್ಯಕ್ಷ ಹು ಜಿಂಟಾವೊ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಪಾಕಿಸ್ತಾನ ಸರಕಾರದ ಕೇಂದ್ರ ಹಣಕಾಸು ಸಚಿವ ಇಷಾಕ್ ಧರ್ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವೆ ತೆಹಮಿನಾ ದೌಲಾತಾನಾ ಅವರುಗಳು ಅಧ್ಯಕ್ಷರನ್ನು ಒಳಗೊಂಡ ತಂಡದಲ್ಲಿ ಚೀನಾ ಪ್ರವಾಸಕ್ಕೆ ತೆರಳಲು ಅಂತಿಮ ಕ್ಷಣದಲ್ಲಿ ನಿರಾಕರಿಸಿದರು.
ಮುಷರಫ್ ಅವರೊಂದಿಗೆ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ, ರಕ್ಷಣಾ ಸಚಿವ ಚೌದರಿ ಅಹ್ಮದ್ ಮುಖ್ತರ, ವ್ಯಾಪಾರಾಭಿವೃದ್ದಿ ಪ್ರಾಧಿಕಾರದ ಮುಖ್ಯಸ್ಥ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರು ಆರು ದಿನಗಳ ಭೇಟಿಯ ನಿಯೋಗದಲ್ಲಿದ್ದಾರೆ.
|