ಬೋಯಿಂಗ್ 787 ವಿಮಾನಗಳ ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ ನೀತಿಯಿಂದಾಗಿ ವಿಮಾನಯಾನವನ್ನು ಆಧುನೀಕರಣಗೊಳಿಸುವ ಯತ್ನಕ್ಕೆ ಅಡ್ಡಿಯಾಗಿದೆ ಎಂದು ಸರಕಾರ ಅಸಮಧಾನ ವ್ಯಕ್ತಪಡಿಸಿದೆ.
ಏರ್‌ಇಂಡಿಯಾ, ವಿಮಾನಯಾನವನ್ನು ಆಧುನೀಕರಣಗೊಳಿಸಲು ಯೋಜನೆಗಳನ್ನು ರೂಪಿಸಿದ್ದು, ಬೋಯಿಂಗ್ 787 ವಿಮಾನಗಳ ವಿತರಣೆಯಲ್ಲಿ ಅಮೆರಿಕದ ವಿಮಾನ ತಯಾರಿಕೆ ಸಂಸ್ಥೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಆರೋಪಿಸಿದ್ದಾರೆ.
ಬೋಯಿಂಗ್ -787 ವಿಮಾನ ಪೂರೈಕೆಯಲ್ಲಿ ಆರು ತಿಂಗಳು ವಿಳಂಬವಾಗುತ್ತಿದೆ ಎಂದು ಅಮೆರಿಕದ ವಿಮಾನ ವಿತರಣಾ ಸಂಸ್ಥೆ ಪ್ರಕಟಿಸಿದ ಹಿನ್ನೆಲೆಯಲ್ಲಿ, ಮುಂದಿನ ವರ್ಷ ಬೋಯಿಂಗ್ ಏರ್‌ಇಂಡಿಯಾಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
|