ಭಾರತ ಮತ್ತು ಇತರ ಏಳು ದೇಶಗಳು ಅಕ್ರಮ ವಲಸೆಗಾರರನ್ನು ಪುನಃ ತಮ್ಮ ದೇಶಗಳಿಗೆ ಸೇರಿಸಿಕೊಳ್ಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ದೇಶಗಳನ್ನು ಗುರಿಯಾಗಿಸಿಕೊಂಡು, ಮಸೂದೆಯೊಂದನ್ನು ಹೌಸ್ ಆಫ್ ರೆಪ್ರೆಸೆಂಟೇಟಿವ್‌ನಲ್ಲಿ ಪರಿಚಯಿಸಲಾಗಿದೆ.
ಈ ಮಸೂದೆಗೆ ಸೂಕ್ತವೆನಿಸುವಂತೆ ಪ್ರತಿ 90 ದಿನಗಳಿಗೆ ಒಮ್ಮೆ , ವಲಸೆಕಾರರ ಪುನಃ ಪ್ರವೇಶವನ್ನು ನಿರಾಕರಿಸುವ ದೇಶಗಳ ವಿರುದ್ಧ ವರದಿಯೊಂದನ್ನು ಕಾಂಗ್ರೆಸ್‌ಗೆ ಕಳುಹಿಸಲಾಗುತ್ತದೆ. ಇದು ನಿರೂಪಿತಗೊಂಡಲ್ಲಿ, ಆ ದೇಶಗಳಿಗೆ ನೀಡಲಾಗುವ ನೆರವನ್ನು ತಡೆಹಿಡಿಯಲಾಗುತ್ತದೆ ಮತ್ತು ನೀಡಲಾಗುವ ವೀಸಾಗಳನ್ನು ರದ್ದುಗೊಳಿಸಲಾಗುತ್ತದೆ.
ಇದನ್ನು ಕಳೆದ ತಿಂಗಳು ಜಾರಿಗೆ ತರಲಾದ, ವಲಸೆಗಾರರ ಗಡಿಪಾರು ಉತ್ತರದಾಯಿತ್ವ 2008ರ ನಿಯಮದ ಜೊತೆಗೆ ಸೇರಿಸಲಾಗುವುದು ಮತ್ತು ಇದನ್ನು ಕಾಂಗ್ರೆಸ್ ಸದಸ್ಯರಾದ ಚಾರ್ಲಿ ಡೆಂಟ್ ಮತ್ತು ಮೈಕೆಲ್ ಕ್ಯಾಸೆಲ್ ಪರಿಚಯಿಸಿದ್ದರು. "ಇದೊಂದು ಆಘಾತಕಾರಿ ವಿಷಯವಾಗಿದೆ. ಅಕ್ರಮ ವಲಸೆಗಾರನ್ನು, ಅವರ ಮೂಲ ದೇಶಗಳು ಪುನಃ ಸೇರಿಸಿಕೊಳ್ಳಲು ನಿರಾಕರಿಸಿರುವುದರ ಹಿನ್ನೆಲೆಯಲ್ಲಿ, ಅಮೇರಿಕಾದಲ್ಲಿಯೇ ಕಾಲಕಳೆಯುತ್ತಿದ್ದಾರೆ" ಎಂದು ಕ್ಯಾಸೆಲ್ ತಿಳಿಸಿದರು.
ಫೆಬ್ರವರಿ 11, 2008 ಮಾಹಿತಿಯಂತೆ, ಭಾರತ, ಲಾವೋಸ್, ಇರಾನ್, ಇರಾನ್, ಎರೆಟ್ರಿಯಾ, ವಿಯೆಟ್ನಾಂ, ಜಮೈಕಾ, ಚೀನಾ ಮತ್ತು ಇಥಿಯೋಪಿಯಾ ದೇಶಗಳ ಸುಮಾರು 139000 ಅಕ್ರಮ ವಲಸೆಕಾರರ ವಾಪಾಸಾತಿಗೆ ಈ ದೇಶಗಳು ನಿರಾಕರಿಸಿವೆ. 18000 ಮಂದಿ ಅಪರಾಧಿಗಳೆಂದು ನಿರೂಪಿಸಲ್ಪಟ್ಟಿದೆ. ಆದರೆ ಅವರನ್ನು ಬಿಡುಗಡೆಗೊಳಿಸಲಾಗಿದೆ.
"ಇದು ವಲಸೆ ನಿಯಮದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಲಿದೆ" ಎಂದು ಕ್ಯಾಸೆಲ್ ತಿಳಿಸಿದರು.
|