ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಪಾಳ: ಮಾವೋವಾದಿಗಳಿಗೆ ಮುನ್ನಡೆ
ಶುಕ್ರವಾರ ನೇಪಾಳ ಸಂಸತ್ತಿಗೆ ನಡೆದ ಐತಿಹಾಸಿಕ ಚುನಾವಣೆಯ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ಮಾವೋವಾದಿಗಳು ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿದ್ದು 48 ಸ್ಥಾನಗಳಲ್ಲಿ ಮಾವೋ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

ನೇಪಾಳಿ ಕಾಂಗ್ರೆಸ್ ಮತ್ತು ಸಿಪಿಎನ್-ಯುಎಂಎಲ್ ಪಕ್ಷಗಳು ತಲಾ ಒಂದು ಸ್ಥಾನದಲ್ಲಿ ಜಯಗಳಿಸಿವೆ. 240 ಸಂಸತ್ ಸ್ಥಾನಗಳಿಗೆ ನಡೆದ ನೇರ ಚುನಾವಣೆಯಲ್ಲಿ ಸಿಪಿಎನ್ ಮತ್ತು ಮಾವೋವಾದಿ ಪಕ್ಷದ ವತಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೇಂದ್ರ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ.

ಮಾವೋವಾದಿ ಪಕ್ಷದ ಅಭ್ಯರ್ಥಿಗಳಾದ ದೇವ್ ಗುರುಂಗ್ ಮತ್ತು ಪಂಫಾ ಭುಷಲ್ ಅವರುಗಳು ಮನಾಂಗ್ ಮತ್ತು ಲಲೀತಪುರ್-3 ಸಂಸತ್ ಕ್ಷೇತ್ರದಿಂದ ಜಯಸಾಧಿಸಿದ್ದು ಇತರ ಅಭ್ಯರ್ಥಿಗಳಾದ ಲೀಲಾ ಸುಮೈ ಮತ್ತು ರಾಜಿ ಕಾಜಿ ಮಹಾರ್ಜನ್, ಪಲ್ಪಾ-2 ಲಲೀತಪುರ್ -2 ಕ್ಷೇತ್ರಗಳಿಂದ ಆಯ್ಕೆಯಾಗಿದ್ದಾರೆ.

240 ವರ್ಷಗಳ ಪ್ರಾಚೀನ ರಾಜಪ್ರಭುತ್ವಕ್ಕೆ ಅಂತ್ಯ ಹೇಳುವ ನಿಟ್ಟಿನಲ್ಲಿ ನಡೆದ ನೇಪಾಳ ಮಹಾಚುನಾವಣೆಯ ಮೊದಲ ಫಲಿತಾಂಶ ಕಾಕತಾಳೀಯ ಎಂಬಂತೆ ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೋಯಿರಾಲಾ ಅವರ ನೇಪಾಳ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಮಾನ್ ಸಿಂಗ್ ಅವರಿಗೆ ಒಲಿಯುವ ಮೂಲಕ ಪ್ರಾರಂಭವಾಯಿತು.
ಮತ್ತಷ್ಟು
ವಲಸೆ ವಿವಾದ: ದಿಗ್ಬಂಧನದ ಭೀತಿ
ಬೋಯಿಂಗ್-787 ಪೂರೈಕೆ ವಿಳಂಬಕ್ಕೆ ಅಸಮಾಧಾನ
ಪರ್ವೇಜ್ ಮುಷರಫ್ ಅವರ ಚೀನಾ ಭೇಟಿ
ಅಮೆರಿಕದ ಸಂಸತ್ತಿನಿಂದ ಚೀನಾ ವಿರುದ್ಧ ಗೊತ್ತುವಳಿ ಅಂಗಿಕಾರ
ಷಾಜಹಾನ್ ಖಡ್ಗ 13.4 ಕೋಟಿ ರೂ.ಗೆ ಹರಾಜು
ಸಿಹಿ ಸುದ್ದಿ: ನಿಮ್ಮ ಕಾರು ಓಡಿಸಲು ಸಕ್ಕರೆ!