ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಲೇಷಿಯಾ: ಶೀಘ್ರದಲ್ಲಿ ಬದ್ವಾಯಿಯಿಂದ ಅಧಿಕಾರ ಹಸ್ತಾಂತರ
ಆಡಳಿತಾರೂಢ ಸಮ್ಮಿಶ್ರ ಸರಕಾರವು ಚುನಾವಣೆಯಲ್ಲಿ ಅನುಭವಿಸಿರುವ ವೈಫಲ್ಯತೆಯನ್ನು ಒಪ್ಪಿಕೊಂಡಿರುವ ಮಲೇಷಿಯಾದ ಪ್ರಧಾನಿ ಅಬ್ದುಲ್ ಅಹ್ಮದ್ ಬದ್ವಾಯಿ ಅವರು ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಉಪಪ್ರಧಾನಿ ಅವರಿಗೆ ಅಧಿಕಾರ ಹಸ್ತಾಂತರ ಮಾಡುತ್ತೇವೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬದ್ವಾಯಿ ಅವರು ಕಳೆದ ಶುಕ್ರವಾರ ಪಕ್ಷದ ಪದಾಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಯ ನಂತರ ತಮ್ಮ ಉತ್ತರಾಧಿಕಾರಿಯಾಗಿರುವ ನಜೀಬ್ ರಜಾಕ್ ಅವರಿಗೆ ಅಧಿಕಾರ ಹಸ್ತಾಂತರಿಸಲು ಒಪ್ಪಿಗೆ ಸೂಚಿಸಿದರು.

ಮಲೇಷಿಯಾದ ಜೊಹೋರ್ ರಾಜ್ಯದ ಪ್ರವಾಸದ ಸಂದರ್ಭದಲ್ಲಿ ಯುನೈಟೆಡ್ ಮಲಯಾಸ್ ನ್ಯಾಷನಲ್ ಆರ್ಗನೈಜೇಷನ್ ಪಾರ್ಟಿಯ ಕೆಲ ಪದಾಧಿಕಾರಿಗಳು ಕಳೆದ ಮಹಾಚುನಾವಣೆಯ ನಂತರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಾಯಿಸಿರುವುದನ್ನು ಒಪ್ಪಿಕೊಂಡಿದ್ದಾರೆ.

ನಾನು ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಇತ್ತು ಎಂದು ಒಪ್ಪಿಕೊಂಡ ಅವರ, ಮಾತಿನಲ್ಲಿ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನಾನೇ ಕಾರಣ ಎಂದು ಭಾವಿಸುತ್ತೇನೆ.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಶಾಹ್ರಿರ್ ಸಮದ್ ಅವರು ಬದ್ವಾಯಿ ಅವರ ಅಧಿಕಾರ ಹಸ್ತಾಂತರದ ಪ್ರಕ್ರಿಯೆಯ ಮಾಹಿತಿಯನ್ನು ಸುದ್ದಿಗಾರರಿಗೆ ನೀಡಿದರು.
ಮತ್ತಷ್ಟು
ಭಾರತೀಯ ತಂಡದ ಮೇಲೆ ಆತ್ಮಾಹುತಿ ದಾಳಿ
ಮುಷರಫ್‌ರೊಂದಿಗೆ ಸಹಕರಿಸದ ಪಿಎಂಎಲ್( ಎನ್)
ನೇಪಾಳ: ಮಾವೋವಾದಿಗಳಿಗೆ ಮುನ್ನಡೆ
ವಲಸೆ ವಿವಾದ: ದಿಗ್ಬಂಧನದ ಭೀತಿ
ಬೋಯಿಂಗ್-787 ಪೂರೈಕೆ ವಿಳಂಬಕ್ಕೆ ಅಸಮಾಧಾನ
ಪರ್ವೇಜ್ ಮುಷರಫ್ ಅವರ ಚೀನಾ ಭೇಟಿ