ಹೇರತ್ (ಅಫ್ಘಾನಿಸ್ತಾನ): ರಸ್ತೆ ನಿರ್ಮಾಣ ಕೆಲಸಗಾರರ ಬೆಂಗಾವಲಿನ ಮೇಲೆ ದಾಳಿ ನಡೆಸಿರುವ ಮೂರನೆಯ ಶಂಕಿತನನ್ನು, ಸ್ಫೋಟಕಗಳನ್ನು ತುಂಬಿದ್ದ ಜಾಕೆಟ್‌ನೊಂದಿಗೆ ಬಂಧಿಸಿರುವುದಾಗಿ ಅಫ್ಘಾನ್ ಅಧಿಕಾರಿಗಳು ಹೇಳಿದ್ದಾರೆ. ಶನಿವಾರದ ಆತ್ಮಾಹುತಿ ದಾಳಿಯಲ್ಲಿ ಭಾರತಿಯರಿಬ್ಬರು ಹತರಾಗಿದ್ದು ಇತರ ಐವರು ಗಾಯಗೊಂಡಿದ್ದರು.
ನಿಮ್ರೋಜ್ ಪ್ರಾಂತ್ಯದ ಸೇತುವೆಯೊಂದರಲ್ಲಿ ಕಾರ್ಯನಿರತವಾಗಿದ್ದ ಭಾರತೀಯ ರಸ್ತೆ ಕೆಲಸಗಾರರ ಮೇಲೆ ಇಬ್ಬರು ಆತ್ಮಾಹುತಿ ದಾಳಿಕೋರರು ದಾಳಿನಡೆಸಿದ್ದಾರೆ ಎಂದು ಪ್ರಾಂತ್ಯದ ಗವರ್ನರ್ ಗುಲಾಮ್ ದಸ್ತ್‌ಗಿರ್ ಅಜಾದ್ ಹೇಳಿದ್ದಾರೆ.
ಭಾರತೀಯ ಕೆಲಸಗಾರರ ವಿರುದ್ಧ ಕಳೆದ ನಾಲ್ಕು ತಿಂಗಳಲ್ಲಿ ನಡೆಯುತ್ತಿರುವ ಎರಡನೇ ದಾಳಿ ಇದಾಗಿದೆ. ಶನಿವಾರದ ದಾಳಿಯಲ್ಲಿ ಎಂ.ಪಿ.ಸಿಂಗ್ ಮತ್ತು ಸಿ. ಗೋವಿಂದಸ್ವಾಮಿ ಅವರು ಹತರಾಗಿದ್ದಾರೆ. ಎಂಜಿನಿಯರುಗಳನ್ನು ಕರೆದೊಯ್ಯುತ್ತಿದ್ದ ವ್ಯಾನಿನ ಎದುರು ಆತ್ಮಹತ್ಯಾ ದಾಳಿಗಾರರು ಬಾಂಬ್ ಸ್ಫೋಟಿಸಿಕೊಂಡಿದ್ದು ಇತರ ಐವರು ಗಾಯಗೊಂಡಿದ್ದಾರೆ.
ಮೃತದೇಹಗಳು ಭಾನುವಾರ ಕಾಬೂಲ್‌ಗೆ ಬರಲಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ, ಸೋಮವಾರ ಭಾರತಕ್ಕೆ ಕಳುಹಿಸುವ ನಿರೀಕ್ಷೆ ಇದೆ.
|