ಚೀನದ ಲಿಯೋನಿಂಗ್ ಪ್ರಾಂತ್ಯದ ಹುಲುಡಾವೊ ಎಂಬಲ್ಲಿನ ಕಲ್ಲಿದ್ದಲು ಗಣಿಯಲ್ಲಿ ಅನಿಲ ಸ್ಫೋಟಗೊಂಡ ಪರಿಣಾಮ 14 ಮಂದಿ ಹತರಾಗಿದ್ದು, ಇತರ ಇಬ್ಬರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಖಾಸಗಿ ಕಂಪೆನಿಯ ಕಾರ್ಮಿಕರು ಅಧಿಕೃತವಾಗಿ ಅನುಮತಿ ಇರುವ ಮಿತಿಗಿಂತಲೂ ಹೆಚ್ಚು ಆಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ.
ಇದರ ಹಿನ್ನೆಲೆಯಲ್ಲಿ ಇತರ 77 ಕಲ್ಲಿದ್ದಲು ಗಣಿಗಳ ಅಳತೆ ಮಾಡುವ ನಿಟ್ಟಿನಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಹೇಳಲಾಗಿದೆ ಎಂದು ಅಧಿಕೃತ ಸುದ್ದಿಸಂಸ್ಥೆ ಝ್ಸಿನುವಾ ವರದಿ ಮಾಡಿದೆ.
ಚೀನದಲ್ಲಿನ ಗಣಿಗಾರಿಕೆಯು ಜಗತ್ತಿನಲ್ಲೇ ಮಾರಣಾಂತಿಕವಾಗಿದ್ದು ಆಗೀಗ ಅಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ.
|